ಶಿವಮೊಗ್ಗ : ಕಳೆದ ಜನೆವರಿ 7 ರಂದು ಸಿಎಂ ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಎಂದು ದಾಖಲೆ ಬರೆದಿದ್ದಾರೆ. ಅಷ್ಟೆ ಅಲ್ಲದೇ ಮೇ ಮೊದಲ ಅಥವಾ ಎರಡನೇ ವಾರದಲ್ಲಿ 17ನೇ ಬಾರಿ ದಾಖಲೆ ಬಜೆಟ್ ಕೂಡ ಮಂಡನೆ ಮಾಡಲಿದ್ದಾರೆ.ಒಟ್ಟಾರೆಯಾಗಿ ದಾಖಲೆರಾಮಯ್ಯರಾಗಿ ಸಿದ್ದರಾಮಯ್ಯ ಹೊರಹೊಮ್ಮಿದ್ದಾರೆ.
ಇದೀಗ ಜನವರಿ 22ರಂದು ಕರೆದಿರುವ ಅಧಿವೇಶನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊನೆಯ ಅಧಿವೇಶನವಿರಬಹುದು. ಈ ಅಧಿವೇಶನವನ್ನು ವಿದಾಯದ ಭಾಷಣವಾಗುವ ಸಾಧ್ಯತೆ ಇದೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪನವರು ಅಧಿವೇಶನ ಕರೆದಿರುವ ಬಗ್ಗೆ ವ್ಯಂಗ್ಯವಾಡಿದ್ದಾರೆ.
22ನೇ ತಾರೀಕಿನಿಂದ ಅಧಿವೇಶನ ಕರೆಯುತ್ತಿದ್ದಾರೆ. ಅವರು ಮಾಡುತ್ತಿರುವ ತರಾತುರಿ ನೋಡುತ್ತಿದ್ದರೆ ನನಗೆ ಅವರದು (ಸಿಎಂ ಸಿದ್ದರಾಮಯ್ಯ) ಇದು ಕೊನೆ ಅಧಿವೇಶನ ಅನ್ನಿಸಲು ಪ್ರಾರಂಭವಾಗುತ್ತಿದೆ. ಹೀಗಾಗಿ ಹೊಸ ಮುಖ್ಯಮಂತ್ರಿಗಳು ಬರುತ್ತಾರೆ ಎಂದು ಅನಿಸುತ್ತದೆ. ಬರಲಿ, ಯಾರು ಬಂದರೂ ಇನ್ನು ಮುಂದೆಯಾದರೂ ಅಭಿವೃದ್ಧಿ ಮಾಡುವುದರ ಬಗ್ಗೆ ಯೋಚನೆ ಮಾಡಬೇಕು.








