ಚಿಕ್ಕಬಳ್ಳಾಪುರ : ಜಿಲ್ಲೆಯ ಎ. ಕೊತ್ತೂರಲ್ಲಿ ದಲಿತರು ಮತ್ತು ಸವರ್ಣಿಯರ ನಡುವೆ ಘರ್ಷಣೆ ಉಂಟಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಎ ಕುತ್ತೂರು ಗ್ರಾಮದಲ್ಲಿ ಒಂದು ಘಟನೆ ನಡೆದಿದ್ದು, ಗ್ರಾಮ ದೇವತೆ ಮೆರವಣಿಗೆ ಮಾಡುವ ವಿಚಾರದಲ್ಲಿ ಗಲಾಟೆ ನಡೆದಿದೆ.
ದಲಿತರು ಉತ್ಸವ ಮೂರ್ತಿ ಹೊರದಂತೆ ಸವರ್ಣೀಯರು ದಲಿತರನ್ನು ತಡೆದಿದ್ದಾರೆ ಜಗಳದಲ್ಲಿ ಕೊನೆಗೆ ದೇವರ ವಿಗ್ರಹವನ್ನು ನಡು ರಸ್ತೆಯಲ್ಲಿ ಜನರು ಬಿಟ್ಟಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಎ ಕೊತ್ತೂರಿನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








