ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಹಳದಿ ಮಾರ್ಗದಲ್ಲಿ ಸಂಚರಿಸಲಿರುವಂತ 8ನೇ ರೈಲು ಜನವರಿ.19ರ ನಾಳೆ ಬೆಂಗಳೂರಿಗೆ ತಲುಪಲಿದೆ. ಆ ಬಳಿಕ ಮುಂದಿನ ದಿನಗಳಲ್ಲಿ ಹಳದಿ ಮಾರ್ಗದಲ್ಲಿ 8ನೇ ರೈಲು ಸಂಚಾರ ಆರಂಭಗೊಳ್ಳಲಿದೆ.
ಬೆಂಗಳೂರಲ್ಲಿ ಆಗಸ್ಟ್.10ರಂದು ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರವನ್ನು ಉದ್ಘಾಟಿಸಲಾಗಿತ್ತು. ಇದೀಗ ಮತ್ತೊಂದು ಗುಡ್ ನ್ಯೂಸ್ ಎನ್ನುವಂತೆ ನಾಳೆ ರಾತ್ರಿ 8ನೇ ಡ್ರೈವರ್ ಲೆಸ್ ರೈಲು ಬೆಂಗಳೂರಿಗೆ ತಲುಪಲಿದೆ. ಹೀಗಾಗಿ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಹೆಚ್ಚಾಗಲಿದ್ದು, ಇದರಿಂದ ರೈಲುಗಳ ಓಡಾಟದ ಸಮಯ ಕೂಡ ಕಡಿಮೆಯಾಗಲಿದೆ.
ಸದ್ಯ ಬೆಂಗಳೂರಿನ ಯೆಲ್ಲೋ ಮಾರ್ಗದಲ್ಲಿ 10 ನಿಮಿಷಗಳಿಗೆ ಒಂದರಂತೆ ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ನಾಳೆ 8ನೇ ರೈಲು ಬೆಂಗಳೂರಿಗೆ ತಲುಪಿ, ಸಂಚಾರ ಆರಂಭದ ಬಳಿಕ ಸಮಯದಲ್ಲಿ ಕಡಿಮೆಯಾಗೋ ಸಾಧಅಯತೆ ಇದೆ.
ಅಂದಹಾಗೇ ಜನವರಿ.19ರಂದು ನಾಳೆ ರಾತ್ರಿ ಬೆಂಗಳೂರಿನ ಹೆಬ್ಬಗೋಡಿ ಡಿಪೋವನ್ನು 8ನೇ ರೈಲು ತಲುಪವಿದೆ. ಆ ಬಳಿಕ ರೈಲಿನ ಪರೀಕ್ಷೆ, ತಾಂತ್ರಿಕ ಪರೀಕ್ಷೆಯ ಬಳಿಕ ವಾಣಿಜ್ಯ ಸಂಚಾರದ ಕಾರ್ಯಾಚರಣೆಯನ್ನು ಬಿಎಂಆರ್ ಸಿಎಲ್ ಆರಂಭಿಸೋ ಸಾಧ್ಯತೆ ಇದೆ.
ವಾರ್ತಾ ಇಲಾಖೆ ಸಂಬಂಧಿತ ಶ್ರೀನಿವಾಸಮೂರ್ತಿ ಸಮಿತಿಯ ವರದಿ ಜಾರಿಗೆ ಸಿಎಂ ಉತ್ಸುಕ: ಶೀಘ್ರವೇ ಆಯುಕ್ತರ ಜತೆ ಚರ್ಚೆ
ಮ್ಯಾಟ್ರಿಮೋನಿಯಲ್ಲಿ ವಿವಾಹಕ್ಕಾಗಿ ಹುಡುಗರನ್ನು ಹುಡುಕೋ ಹುಡುಗಿಯರೇ ಈ ಸುದ್ದಿ ಓದಿ.!








