ಬೀದರ್: ರಾಜ್ಯದಲ್ಲೊಂದು ಘೋರ ದುರಂತ ಎನ್ನುವಂತೆ ಗಾಳಿಪಟ ಹಿಡಿಯೋದಕ್ಕೆ ಹೋದಂತ ಯುವಕನೊಬ್ಬ ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿರುವಂತ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ಹಾರಿಸಿದ್ದಂತ ಗಾಳಿಪಟ ಹಿಡಿಯೋದಕ್ಕೆ ತೆರಳಿದಂತ ಶಶಿಕುಮಾರ್ ಶಿವಾನಂದ (19) ಎಂಬ ಬಾಲಕ, ಕಟ್ಟಡದ ಮೇಲಿನಿಂದ ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಗಾಳಿಪಟ ಹಾರಿಸುವಾಗ ದಾರ ತುಂಡಾಗಿದ್ದರಿಂದ, ಅದನ್ನು ಹಿಡಿಯೋದಕ್ಕೆ ಶಶಿಕುಮಾರ್ ಓಡಿ ಹೋಗಿದ್ದನು. ಈ ವೇಳೆ ಕಟ್ಟಡದ ಮೇಲಿನಿಂದ ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಈ ಸಂಬಂಧ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








