ದಾವಣಗೆರೆ : ದಾವಣಗೆರೆಯಲ್ಲಿ ಗಾಂಜಾ ಮತ್ತು ಸಿಂಥೆಟಿಕ್ ಡ್ರಗ್ ಪೂರೈಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಮತ್ತೊಬ್ಬ ಉದ್ಯಮಿಯನ್ನು ಅರೆಸ್ಟ್ ಮಾಡಿದ್ದಾರೆ. ದಾವಣಗೆರೆಯ ವಿದ್ಯಾನಗರ ಪೊಲೀಸರು ಉದ್ಯಮಿ ಶಿವರಾಜನನ್ನು ಬಂಧಿಸಿದ್ದಾರೆ.
ದಾವಣಗೆರೆಯ ಎಸ್ ಎಸ್ ಲೇಔಟ್ ನಿವಾಸಿಯಾಗಿರುವ ಶಿವರಾಜ್ ಈ ಹಿಂದೆ ಆರ್ಟಿಓ ಕಚೇರಿಯಲ್ಲಿ ಏಜೆಂಟ್ ಆಗಿದ್ದ. ಸಂಘಟನೆ ಒಂದರಲ್ಲಿ ಆರೋಪಿ ಶಿವರಾಜ್ ಗುರುತಿಸಿಕೊಂಡಿದ್ದ. ಈಗಾಗಲೇ ಉದ್ಯಮಿ ಶಾಮನೂರು ವೇದಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಮತ್ತು ವೀರಶೈವ ಮಹಾಸಭಾ ಸದಸ್ಯರಾಗಿರುವ ಒಬ್ಬ ವೇದಮೂರ್ತಿಯನ್ನು ಇದೇ ಪ್ರಕರಣದಲ್ಲಿ ಅರೆಸ್ಟ್ ಮಾಡಿದ್ದರು. ಈ ಒಂದು ಪ್ರಕರಣ ಸಂಬಂಧ ಪೊಲೀಸರು ಇದುವರೆಗೂ 11 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ದಾವಣಗೆರೆಯ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಮತ್ತು ಸಿಂಥೆಟಿಕ್ ಡ್ರಗ್ ಪ್ರಕರಣ ದಾಖಲಾಗಿತ್ತು.








