ಬೆಂಗಳೂರು : ಕನ್ನಡ ಬಿಗ್ ಬಾಸ್ ಸೀಸನ್ 12ರ ಫಿನಾಲೆ ಕಾರ್ಯಕ್ರಮ ಎಂದು ನಡೆಯಲಿದ್ದು ಗ್ರಾಂಡ್ ಫಿನಾಲೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ ನಟ ಕಿಚ್ಚ ಸುದೀಪ್ ಅವರು ಇಂದು ನಡೆಯುವ ಗ್ರಾಂಡ್ ಫಿನಾಲೆಯಲ್ಲಿ ವಿಜೇತರು ಯಾರು ಎಂಬುದನ್ನು ಘೋಷಿಸಲಿದ್ದಾರೆ ಈ ಒಂದು ಬಿಗ್ ಬಾಸ್ ವಿಜೇತರು 50 ಲಕ್ಷ ಹಣ ಹಾಗೂ ಬಿಗ್ ಬಾಸ್ ಸೀಸನ್ 12ರ ಕಪ್ ಪಡೆಯಲಿದ್ದಾರೆ.
ಇನ್ನು ಈ ವಿಚಾರವಾಗಿ ನಟ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದು, ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಇಂದು ಸೂರ್ಯಸ್ತದ ಬಳಿಕ ತಿಳಿಯಲಿದೆ. ವಿನ್ನರ್ ಯಾರು ಎಂದು ಘೋಷಣೆ ಮಾಡಲಾಗುತ್ತದೆ. ಇಂದು ಸೂರ್ಯಾಸ್ತ ಬಳಿಕ ಬಿಗ್ ಬಾಸ್ ಸೀಸನ್ 12 ಅಂತ್ಯವಾಗಲಿದ್ದು 13ನೇ ಸೀಸನ್ ಆರಂಭದವರೆಗೂ ಮನೆ ಬಾಗಿಲುಗಳು ಮುಚ್ಚಲಾಗುತ್ತದೆ. ಇಂದಿಗೆ ಬಿಗ್ ಬಾಸ್ 12 ಸೀಸನ್ ಯಶಸ್ವಿಯಾಗಿಸಿದ ಎಲ್ಲರಿಗೂ ಧನ್ಯವಾದಗಳು. ಅದ್ಭುತ ಪ್ರಯಾಣದ ಹೆಸರಿಗೆ ಕಾರಣರಾದ ತಾಂತ್ರಿಕ ತಂಡದವರಿಗೆ ಧನ್ಯವಾದ ಎಂದು ಪ್ರತಿಯೊಬ್ಬರಿಗೂ ಕಿಚ್ಚ ಸುದೀಪ್ ಧನ್ಯವಾದ ತಿಳಿಸಿದ್ದಾರೆ.
And thus… by sundown today,, #BBK12 shall come to a close. This remarkable season,, an extraordinary voyage of growth and spectacle,, has borne witness to BigBoss’s growth with every passing season. My profound gratitude to every devoted viewer for unwavering support❤️,,… pic.twitter.com/Y9AF5mKFMN
— Kichcha Sudeepa (@KicchaSudeep) January 18, 2026








