Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಕೆಲಸದಿಂದ ವಜಾ’ ಶಿಕ್ಷೆಯು ಕೇವಲ ಗಂಭೀರ ದುರ್ನಡತೆಗೆ ಮಾತ್ರ ಸೀಮಿತವಾಗಿರಬೇಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

​ಟ್ವಿಷಾ ಶರ್ಮಾ ಸಾವು ಪ್ರಕರಣ: ಡಿಜಿಟಲ್ ತನಿಖೆ ಚುರುಕುಗೊಳಿಸಿದ ಸಿಬಿಐ; ಡಿಲೀಟ್ ಆಗಿದ್ದ ವಾಟ್ಸಾಪ್ ಚಾಟ್ಸ್, ಕಾಲ್ ಲಾಗ್ಸ್ ಮೇಲೆ ಕಣ್ಣು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಹಿರಿಯ ನಾಗರಿಕರಿಗೆ ನೆರವು ನೀಡಲು ಪೊಲೀಸರಿಂದ `ಆಸರೆ’ ಯೋಜನೆ : CM ಸಿದ್ದರಾಮಯ್ಯ ಚಾಲನೆ
KARNATAKA

BIG NEWS : ರಾಜ್ಯದ ಹಿರಿಯ ನಾಗರಿಕರಿಗೆ ನೆರವು ನೀಡಲು ಪೊಲೀಸರಿಂದ `ಆಸರೆ’ ಯೋಜನೆ : CM ಸಿದ್ದರಾಮಯ್ಯ ಚಾಲನೆ

By kannadanewsnow57

ಬೆಂಗಳೂರು : ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಹಿರಿಯ ನಾಗರಿಕರ ನೆರವಿಗೆ ರಾಜ್ಯ ಪೊಲೀಸ್ ಇಲಾಖೆ ರೂಪಿಸಿರುವ ನೂತನ ಕಾರ್ಯಕ್ರಮ ‘ಆಸರೆ’ ಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ರಾಜ್ಯದ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರ ದಂಪತಿ ಹಾಗೂ ಏಕಾಂಗಿಯಾ ಗಿರುವ ಹಿರಿಯ ನಾಗರಿಕರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ. ಬಳಿಕ ವೃದ್ಧರ ಸಂಕಷ್ಟಗಳಿಗೆ ಸ್ಪಂದನೆ ಹಾಗೂ ಸಮಯೋಚಿತ ನೆರವು ಒದಗಿಸುವ ಉದ್ದೇಶವಿದೆ. ಹಿರಿಯ ನಾಗರಿಕರ ಜತೆ ನಿರಂತರವಾಗಿ ಪೊಲೀಸರು ಸಂಪರ್ಕದಲ್ಲಿರು ತ್ತಾರೆ. ಅವರ ಮೇಲೆ ಅಪರಾಧ ಮತ್ತು ದೌರ್ಜನ್ಯಗಳು ಘಟಿಸ ದಂತೆ ನಿಗಾವಹಿಸಲಾಗುತ್ತದೆ.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೊಲೀಸ್ ಇಲಾಖೆ ಕೆಲವು ಠಾಣೆಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇನ್ನು ಕೆಲವೆಡೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸುಮಾರು 88 ಪ್ರಕರಣಗಳಲ್ಲಿ ಪೊಲೀಸ್ನವರೇ ಶಾಮೀಲಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರ್ಕಾರ ಮಾತ್ರವಲ್ಲದೆ, ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವಂಥ ಕೆಲಸವಿದು.

2003 ರಿಂದ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರಾಯಚೂರು ಜಿಲ್ಲೆಯ ಕವಿತಾಳ  ಪೊಲೀಸ್ ಠಾಣೆ ದೇಶದಲ್ಲಿಯೇ ಉತ್ತಮ ಪೊಲೀಸ್ ಠಾಣೆಗಳ ಸಾಲಿನಲ್ಲಿ ಮೂರನೇ ಸ್ಥಾನ ಪಡೆದಿದೆ. ಪೊಲೀಸ್  ಸಬ್ ಇನ್ಸ್ಪೆಕ್ಟರ್, ಎ.ಎಸ್.ಪಿ, ಡಿ.ವೈ.ಎಸ್.ಪಿ, ಎಸಿಪಿ ಇವರಿಗೆ ಗೊತ್ತಿಲ್ಲದೆ ಯಾವ ಅಪರಾಧವೂ ನಡೆಯಲು ಸಾಧ್ಯವಿಲ್ಲ. ಪೊಲೀಸರು ಜಾಗರೂಕತೆಯಿಂದ ಕೆಲಸ ಮಾಡಬೇಕೆಂದು ಸ್ಪಷ್ಟವಾಗಿ ಸೂಚಿಸಿದ್ದೇನೆ. ವಿಶೇಷವಾಗಿ ದುರ್ಬಲರಿಗೆ ರಕ್ಷಣೆ ನೀಡಬೇಕು. ಬಲಾಢ್ಯರ ಕೈಗೊಂಬೆಗಳಂತೆ ಕೆಲಸ ಮಾಡಬಾರದು ಎಂದು ಹೇಳಿದ್ದೇನೆ.

ಪೊಲೀಸರು ಜಾಗರೂಕತೆಯಿಂದ, ದಕ್ಷತೆಯಿಂದ ಕೆಲಸ ಮಾಡಿದರೆ ರಾಜ್ಯವನ್ನು ಮಾದಕ ವಸ್ತು ಮುಕ್ತವನ್ನಾಗಿಸಬಹುದು.ಕಳ್ಳತನ, ಸುಲಿಗೆ, ದರೋಡೆ, ಕೊಲೆ ಮುಂತಾದ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಸೈಬರ್ ಅಪರಾಧ ಹಾಗೂ ಡ್ರಗ್ಸ್ ಅಪರಾಧಗಳು ಕಡಿಮೆಯಾಗುತ್ತಿಲ್ಲ. ಯುವಜನರು ಇದರಿಂದ ಹಾಳಾಗುತ್ತಿದ್ದು, ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯವಾಗಿಸಬೇಕೆಂದು ಸರ್ಕಾರ ಘೋಷಣೆ ಮಾಡಿದೆ. ಪೊಲೀಸರು ಜಾಗರೂಕತೆಯಿಂದ, ದಕ್ಷತೆಯಿಂದ ಕೆಲಸ ಮಾಡಿದರೆ ರಾಜ್ಯವನ್ನು ಮಾದಕ ವಸ್ತು ಮುಕ್ತವನ್ನಾಗಿಸಬಹುದು. ಜೊತೆಗೆ ಯುವಜನರನ್ನೂ ರಕ್ಷಿಸಬಹುದು.

ಡ್ರಗ್ಸ್ ದಂಧೆ ಮಾಡುವ ವಿದೇಶಿಯರನ್ನು ಮುಲಾಜಿಲ್ಲದೆ ಅವರ ದೇಶಕ್ಕೆ ಕಳುಹಿಸಬೇಕು. ಡ್ರಗ್ಸ್ ಮಾರಾಟ ಮಾಡುವವರನ್ನು ವಿಚಾರಣೆ ಮಾಡಿದರೆ ಅಥವಾ ಮಾದಕ ವಸ್ತು ವ್ಯಸನಿಗಳನ್ನು ವಿಚಾರಿಸಿದರೆ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಬಹುದು. ಸರಬರಾಜು ಮಾಡುವವರನ್ನು ವಿಚಾರಣೆಗೆ ಗುರಿಪಡಿಸಿದರೆ ಉತ್ಪಾದಕರು ಹಾಗೂ ಸರಬರಾಜುದಾರರು ಯಾರು ಎಂದು ತಿಳಿಯುತ್ತದೆ. ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ಕೆಲಸವನ್ನು ತಕ್ಷಣದಿಂದಲೇ ಮಾಡಬೇಕೆಂದು ಸೂಚಿಸಿದ್ದೇನೆ.

ವಿದೇಶಿಯರು ಜಾಮೀನಿನ ಮೇಲೆ ಬಿಡುಗಡೆಯಾಗಿ ಇಲ್ಲೇ ಉಳಿದರೆ ಪುನಃ ಅದೇ ಅಪರಾಧದಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ವಿದೇಶಿಯರನ್ನು ಯಾವುದೇ ಮುಲಾಜಿಲ್ಲದೆ ಅವರ ದೇಶಕ್ಕೆ ಕಳುಹಿಸಬೇಕು ಎಂದು ಸೂಚಿಸಿದ್ದೇನೆ.

ಠಾಣೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಡಿ.ವೈ.ಎಸ್.ಪಿ ಗಳ ಮೇಲೆ  ಮೇಲಾಧಿಕಾರಿಗಳು ನಿಗಾ ಇಡಲು ಸೂಚಿಸಲಾಗಿದೆ. ಅಪರಾಧಗಳಲ್ಲಿ ಅವರು ಶಾಮೀಲಾಗಬಾರದು.

ಮಹಾರಾಷ್ಟ್ರದ ಪೊಲೀಸರಿಗೆ ಬೆಂಗಳೂರಿಗೆ ಬಂದು ಡ್ರಗ್ಸ್ ಪತ್ತೆಹಚ್ಚಲು ಸಾಧ್ಯವಾದರೆ, ರಾಜ್ಯದ ಪೊಲೀಸರಿಗೆ ಯಾಕೆ ಸಾಧ್ಯವಾಗದು? ರಾಜ್ಯದ ಪೊಲೀಸರು ಇದನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದು,   ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಪೊಲೀಸ್‌ ಇಲಾಖೆ ಕೆಲವು ಠಾಣೆಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇನ್ನು ಕೆಲವೆಡೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸುಮಾರು 88 ಪ್ರಕರಣಗಳಲ್ಲಿ ಪೊಲೀಸ್‌ನವರೇ ಶಾಮೀಲಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರ್ಕಾರ ಮಾತ್ರವಲ್ಲದೆ, ಪೊಲೀಸ್‌ ಇಲಾಖೆಗೆ ಕೆಟ್ಟ ಹೆಸರು ತರುವಂಥ ಕೆಲಸವಿದು.

2003… pic.twitter.com/E57ybIdULf

— Siddaramaiah (@siddaramaiah) January 17, 2026

BIG NEWS: Police launch 'Asaray' scheme to provide assistance to senior citizens of the state: CM Siddaramaiah
Share. Facebook Twitter LinkedIn WhatsApp Email

Related Posts

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

1 Min Read

ALERT : ನಿಮ್ಮ `ಮೊಬೈಲ್’ ಕಳೆದುಹೋಗಿದೆಯೇ? ಮನೆಯಲ್ಲೇ ಕುಳಿತು ಬ್ಲಾಕ್ ಮಾಡಿ; ಡೇಟಾವನ್ನು ಕಳ್ಳರಿಂದ ರಕ್ಷಿಸಿಕೊಳ್ಳಿ!

2 Mins Read

ಮಹಿಳೆಯರೇ ಗಮನಿಸಿ : `LPG’ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬರಬೇಕೇ? ಅಡುಗೆ ಮಾಡುವಾಗ ಈ 5 ಸಲಹೆಗಳನ್ನು ಪಾಲಿಸಿ!

2 Mins Read
Recent News

​’ಕೆಲಸದಿಂದ ವಜಾ’ ಶಿಕ್ಷೆಯು ಕೇವಲ ಗಂಭೀರ ದುರ್ನಡತೆಗೆ ಮಾತ್ರ ಸೀಮಿತವಾಗಿರಬೇಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

​ಟ್ವಿಷಾ ಶರ್ಮಾ ಸಾವು ಪ್ರಕರಣ: ಡಿಜಿಟಲ್ ತನಿಖೆ ಚುರುಕುಗೊಳಿಸಿದ ಸಿಬಿಐ; ಡಿಲೀಟ್ ಆಗಿದ್ದ ವಾಟ್ಸಾಪ್ ಚಾಟ್ಸ್, ಕಾಲ್ ಲಾಗ್ಸ್ ಮೇಲೆ ಕಣ್ಣು!

SHOCKING : `IVF’ ಮೂಲಕ ಜನಿಸಿದ ಅವಳಿ ಮಕ್ಕಳಿಗೂ ಪೋಷಕರಿಗೂ ಜೈವಿಕ ಸಂಬಂಧವೇ ಇಲ್ಲ : `DNA’ ಟೆಸ್ಟ್ ನಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ.!

State News
KARNATAKA

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

By kannadanewsnow57 KARNATAKA 1 Min Read

ಹಾವೇರಿ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ, ತನಗೆ ವಿದ್ಯೆ ಕಲಿಸಿ, ತಂದೆಯ ಸ್ಥಾನದಲ್ಲಿ ನಿಂತು ನೆರವಾದ…

ALERT : ನಿಮ್ಮ `ಮೊಬೈಲ್’ ಕಳೆದುಹೋಗಿದೆಯೇ? ಮನೆಯಲ್ಲೇ ಕುಳಿತು ಬ್ಲಾಕ್ ಮಾಡಿ; ಡೇಟಾವನ್ನು ಕಳ್ಳರಿಂದ ರಕ್ಷಿಸಿಕೊಳ್ಳಿ!

ಮಹಿಳೆಯರೇ ಗಮನಿಸಿ : `LPG’ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬರಬೇಕೇ? ಅಡುಗೆ ಮಾಡುವಾಗ ಈ 5 ಸಲಹೆಗಳನ್ನು ಪಾಲಿಸಿ!

BREAKING: ‘ಮಹಿಳಾ ನೌಕರ’ರಿಗೆ ಲೈಂಗಿಕ ಕಿರುಕುಳ: ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ್’ ವಿರುದ್ಧ FIR ದಾಖಲು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.