ಬೆಂಗಳೂರು: “ಇಂಟರ್ ಶಿಪ್‌ಗಾಗಿ ಪ್ರತ್ಯೇಕ ಪೊರ್ಟಲ್ ಮಾಡಿರುವ ಪ್ರಮುಖ ಉದ್ದೇಶ, ವಿದ್ಯಾರ್ಥಿಗಳು ತರುತ್ತಿದ್ದ ಸುಳ್ಳು ಪ್ರಮಾಣ ಪತ್ರಗಳನ್ನು ಕಡಿವಾಣ ಹಾಕುವುದೇ ಹೊರತು ದುಡ್ಡು ಮಾಡುವುದಿಲ್ಲ” ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಇಂಟರ್‌ಶಿಪ್ ಕುರಿತು ಪ್ರಕಟವಾಗಿರುವ ವರದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ವಿಟಿಯು ಇತಿಹಾಸದಲ್ಲಿ ಮೊದಲ ಬಾರಿಗೆ ಇಂಟರ್‌ಶಿಪ್ ವ್ಯವಸ್ಥೆಯನ್ನು ಪಾರದರ್ಶಕವಾಗಿ ಜಾರಿಗೆ ತರುವ ಉದ್ದೇಶದಿಂದ ಇಂಟರ್ ಶಿಪ್ ನಿರ್ವಹಣೆಗಾಗಿ ಪ್ರತ್ಯೇಕ ಪೊರ್ಟಲ್ ತೆರೆಯಲಾಗಿದೆ. ಆ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಇಂಟರ್‌ಶಿಪ್ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ವಿಶ್ವವಿದ್ಯಾಲಯ ನಿರ್ವಹಣೆ ಮಾಡುವ ಸ್ಥಿತಿ ವಿಶ್ವವಿದ್ಯಾಲಯಕ್ಕೆ ಇಲ್ಲ. ವಿಶ್ವವಿದ್ಯಾಲಯ ಆರ್ಥಿಕವಾಗಿ ಸದೃಢವಾಗಿದೆ. ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ಕುಲಪತಿಗಳು ತಿಳಿಸುತ್ತಿದ್ದಾರೆ.
80 ಸಾವಿರ ವಿದ್ಯಾರ್ಥಿಗಳಿಗೆ ಇಂಟರ್ ಶಿಪ್‌ಗೆ ಅವಕಾಶ ಕಲ್ಪಿಸಬೇಕು. ಎಲ್ಲಾ ಕಂಪನಿಗಳು ಉಚಿತವಾಗಿಯೇ ಇಂಟರ್ ಶಿಪ್ ನೀಡಿದರೆ, ಅದನ್ನು ನೀಡುವುದಕ್ಕೆ ನಮಗೆ ಯಾವುದೇ ತೊಂದರೆ ಇಲ್ಲ. ನಮ್ಮ ಪೊರ್ಟಲ್ ನಲ್ಲಿ ಉಚಿತ ಇಂಟರ್‌ಶಿಪ್ ನೀಡುವ ಕಂಪನಿಗಳ ಸಹ ಇವೆ. 29 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಇಂಟರ್ ಶಿಪ್ ಸಿಕ್ಕಿದೆ. ಈವರೆಗೆ 66 ಸಾವಿರ ವಿದ್ಯಾರ್ಥಿಗಳು ಇಂಟರ್ ಶಿಪ್‌ಗೆ ನೊಂದಾಯಿಸಿದ್ದಾರೆ. ಮುಂದಿನ ತಿಂಗಳಿನಿಂದ ಇಂಟರ್ ಶಿಪ್ ಆರಂಭವಾಗಲಿದೆ. ಕೆಲವು ಕಂಪನಿಗಳು ಅಗತ್ಯ ಮೂಲಸೌಕರ್ಯ ಹೊಂದಿಲ್ಲ. ಅಂತಹ ಕಂಪನಿಗಳಿಗೆ ಅನುಮತಿ ಸಿಕ್ಕಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ತರಲು ಪಿತೂರಿ ಮಾಡುತ್ತಿದ್ದಾರೆ. ಇದ್ದ ಸಣ್ಣ ಪುಟ್ಟ ಸಮಸ್ಯೆಗಳನ್ನ ಬಗೆಹರಿಸಿದ್ದೇವೆ. ವಿವಿಯು ಎಂದಿಗೂ ವಿದ್ಯಾರ್ಥಿ ಪರವಾಗಿಯೇ ಇರಲಿದೆ” ಎಂದರು.
ಬಿಎಂಟಿಸಿ ಬಸ್ಸಲ್ಲಿ 6 ರೂಪಾಯಿಯ ಬದಲು ರೂ.62,316 ಪೋನ್ ಪೇ ಮಾಡಿದ ಪ್ರಯಾಣಿಕ: ಮುಂದೆ ಆಗಿದ್ದೇನು ಗೊತ್ತಾ?
ಇಡುಗುಂಜಿ ಗಣಪತಿಗೆ ಈ ರೀತಿಯಾದ ಒಂದು ಸಣ್ಣ ಹರಕೆ ಮಾಡಿಕೊಳ್ಳಿ, ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತಂತೆ








