ಉತ್ತರಕನ್ನಡ : ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಓಮ್ನಿ ವಾಹನ ಅಪಘಾತಕ್ಕೆ ಈಡಾಗಿದೆ. ರಸ್ತೆ ಬದಿ ನಿಂತಿದ್ದ ಬೋಲೋರಿ ವಾಹನಕೆ ಓಮ್ನಿ ಕಾರು ಡಿಕ್ಕಿ ಹೊಡೆದಿದೆ. ಉತ್ತರ ಕನ್ನಡದ ಕುಮಟಾ ಪಟ್ಟಣದಲ್ಲಿ ಒಂದು ಘಟನೆ ಸಂಭವಿಸಿದೆ.
ಈ ಒಂದು ಅಪಘಾತದಲ್ಲಿ ಓಮ್ನಿ ಕಾರು ಚಾಲಕ ಸೇರಿದಂತೆ ನಾಲ್ವರು ಮಕ್ಕಳಿಗೆ ಗಂಭೀರವಾದ ಗಾಯಗಳಾಗಿವೆ. ಚಾಲಕನಿಗೆ ತಲೆ ಸುತ್ತು ಬಂದಿದ್ದರಿಂದ ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಓಮ್ನಿ ಕಾರು ಡಿಕ್ಕಿ ಹೊಡೆದಿದೆ. ಕಾರು ಚಾಲಕ ಮತ್ತು ನಾಲ್ವರು ಮಕ್ಕಳಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.








