ಬೆಂಗಳೂರು : 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಪೊಲೀಸರು ಅಬಕಾರಿ ಡಿಸಿ ಜಗದೀಶ್ ನಾಯಕನ್ನು ಅರೆಸ್ಟ್ ಮಾಡಿದ್ದಾರೆ ಬೆಂಗಳೂರಿನ ಬ್ಯಾಟರಾಯನಪುರದ ಅಬಕಾರಿ ಕಚೇರಿಯಲ್ಲಿ ಡಿಸಿ ಜಗದೀಶ್ ನಾಯಕ್ ಅರೆಸ್ಟ್ ಆಗಿದ್ದಾರೆ.
ಮೈಕ್ರೋ ಬ್ರಿವೇರಿ ಮತ್ತು ಸಿಎಲ್ಸಿಗೆ 75 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 75 ಲಕ್ಷಕ್ಕೆ ಅಬಕಾರಿ ಡಿಸಿ ಜಗದೀಶ್ ನಾಯಕ್ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನ 25 ಲಕ್ಷ ಹಣ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಅಬಕಾರಿ ಡಿಸಿ ಜಗದೀಶ್ ನಾಯಕ್, ಅಬಕಾರಿ ಕಚೇರಿ ಅಧಿಕ್ಷಕ ತಮ್ಮಣ್ಣ ಹಾಗು ಅಬಕಾರಿ ಕಾನ್ಸ್ಟೇಬಲ್ ಲಕ್ಕಪ್ಪ ಗಣಿ ಎನ್ನುವವರನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಲೋಕಾಯುಕ್ತ ಪೊಲೀಸರ ದಾಳಿಯ ವೇಳೆ ಅಧಿಕ್ಷಕ ತಮಣ್ಣ ಪರಾರಿಯಾಗಿದ್ದ ಬಳಿಕ ಪೊಲೀಸರು ವಯಾಲಿಕಾವಲ್ ಬಳಿ ಆತನನ್ನು ವಶಕ್ಕೆ ಪಡೆದು ವಾಪಸ್ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಅಬಕಾರಿ ಡಿಸಿ ಜಗದೀಶ್ ನಾಯಕ್ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿರುವ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.








