ಬಾಗಲಕೋಟೆ : ಕೊಲೆಯಾದ ಸ್ಥಿತಿಯಲ್ಲಿ ಒಂಟಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಅನೈತಿಕ ಸಂಬಂಧ ಹೊಂದಿದ ಪ್ರಿಯಕರನೆ ಮಹಿಳೆಯ ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಜನವರಿ 14ರಂದು ರಾತ್ರಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಈ ಒಂದು ಭೀಕರ ಕೊಲೆ ನಡೆದಿತ್ತು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಪ್ರಿಯಕರ ಶ್ರೀಶೈಲ ಮಹಿಳೆಯನ್ನು ಕೊಲಗೈದು ಹಾರ್ಟ್ ಅಟ್ಯಾಕ್ ಆಗಿದೆ ಎಂದು ಬಿಂಬಿಸಿದ್ದ. ಆಸ್ಪತ್ರೆಗೆ ಸೇರಿಸಲು ಯತ್ನಿಸಿ ಕಣ್ಣೀರು ಹಾಕಿ ಶ್ರೀಶೈಲ್ ಡ್ರಾಮ ಮಾಡಿದ್ದ ಕತ್ತು ಹಿಸುಕಿ ಯಮನವ್ವ (40) ಎನ್ನುವ ಮಹಿಳೆಯನ್ನು ಶ್ರೀಶೈಲ್ ಪಾಟೀಲ್ (67) ಭೀಕರವಾಗಿ ಕೊಲೆ ಮಾಡಿದ್ದ. ಯಮನವ್ವ ಕಳೆದ 20 ವರ್ಷದ ಹಿಂದೆ ಗಂಡನಿಂದ ವಿಚ್ಛೇದನ ಪಡೆದಿದ್ದಳು.
ಬಳಿಕ ಅದೇ ಗ್ರಾಮದ ಶ್ರೀಶೈಲ್ ಪಾಟೀಲ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇತ್ತೀಚಿಗೆ ಯುವಕನ ಜೊತೆ ಯಮುನವ್ವ ಸಂಬಂಧ ಹೊಂದಿದ್ದಾಳೆ ಎಂದು ಭಾವಿಸಿ, ನನಗೆ ಮೋಸ ಮಾಡುತ್ತಿದ್ದಾಳೆ ಎಂದು ಶ್ರೀಶೈಲ್ ಆಕೆ ಮೇಲೆ ಕೋಪಗೊಂಡಿದ್ದ. ಜನವರಿ 14ರಂದು ರಾತ್ರಿ ಹೇಮನವ ಮನೆಯಲ್ಲಿ ಇಬ್ಬರಿಗೂ ಜಗಳ ಆಗಿದೆ. ಈ ವೇಳೆ ಬಲವಾಗಿ ಹೊಡೆದು ಯಮುನವನನ್ನು ಶ್ರೀಶೈಲ್ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ.
ಮರುದಿನ ಬೆಳಿಗ್ಗೆ ತಾನೇ ಬಾಗಿಲು ತೆರೆದು ನಾಟಕ ಮಾಡಿದ್ದಾನೆ. ಹಾರ್ಟ್ ಅಟ್ಯಾಕ್ ನಿಂದ ಮೃತಪಟ್ಟಿದ್ದಾಳೆ ಎಂದು ಡ್ರಾಮ ಮಾಡಿದ್ದಾನೆ. ನಂತರ ಸಾವಡಗಿ ಠಾಣೆಗೆ ಶ್ರೀಶೈಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ವಿಚಾರಣೆ ಕೊಲೆ ಮಾಡಿರುವುದು ಬಯಲಾಗಿದೆ. ಆರೋಪಿ ಶ್ರೀಶೈಲ್ ಪಾಟೀಲ್ ಅನ್ನು ಸಾವಳಗಿ ಠಾಣೆ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.








