ಮೈಸೂರು : ಇತ್ತೀಚಿಗೆ ತಾನೇ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪೌರಾಯುಕ್ತೆ ಅಮೃತಗೌಡಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಿಂದನೆ ಮಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿದ್ದ. ಈ ಒಂದು ಘಟನೆ ಮಾಸುವ ಮುನ್ನವೇ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿಯೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.
ಹೌದು ಸಿಎಂ ತವರು ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಗ್ರಾಮದ ಆಡಳಿತ ಅಧಿಕಾರಿಗೆ ಪುಟ್ಟಸ್ವಾಮಿಯ ಕೊಲೆ ಬೆದರಿಕೆ ಹಾಕಿದ್ದಾನೆ ಮೊದಲು ನಿನ್ನ ಹೆಣ ಬೀಳುತ್ತೆ ಎಂದು ಸ್ಥಳೀಯ ಪುಟ್ಟಸ್ವಾಮಿ ಕೊಲೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡಿದ್ದಾನೆ. ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಅವಾಚ್ಯ ಶಬ್ದಗಳಿಂದಲೇ ಕರ್ತವ್ಯ ಎಂದ FIR ದಾಖಲಿಸಲಾಗಿದೆ.
ಸರ್ಕಾರದ ಜಮೀನು ಸ್ವಾಧೀನದ ವೇಳೆ ಅಧಿಕಾರಿಗೆ ಧಮ್ಕಿ ಹಾಕಲಾಗಿದೆ ಜಮೀನು ಪರಿಶೀಲನೆಗೆ ತೆರಳಿದ ಗ್ರಾಮದ ಆಡಳಿತ ಅಧಿಕಾರಿ ಬಂಡಿಪಾಳ್ಯ ವೃತ್ತದ ಜಿ ಭವ್ಯ ಎನ್ನುವ ಅಧಿಕಾರಿ ಗ್ರಾಮ ಸಹಾಯಕ ನವೀನ್ ಕುಮಾರ್ ಜೊತೆಗೆ ತೆರಳಿದಾಗ ಕೊಲೆ ಬೆದರಿಕೆ ಹಾಕಲಾಗಿದೆ. ಮೈಸೂರು ತಾಲೂಕಿನ ಗುಡಮಾದನಹಳ್ಳಿ ಈ ಒಂದು ಘಟನೆ ನಡೆದಿದೆ. ಧಮ್ಕಿ ಹಾಕಿರುವ ಕೊಲೆ ಬೆದರಿಕೆ ವಿಡಿಯೋ ಇದೀಗ ಸೆರೆಯಾಗಿದೆ.








