ಮುಂಬೈ : ಮಹಾರಾಷ್ಟ್ರದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯ ಮತ ಎಣಿಕೆ ಬಹುತೇಕ ಅಂತಿಮಘಟ್ಟ ತಲುಪಿದ್ದು, ಬಿಜೆಪಿ ಶತಕ ಬಾರಿಸುವ ಮೂಲಕ ಭರ್ಜರಿ ಮುನ್ನಡೆ ಸಾಧಿಸಿದೆ.
ಏಷ್ಯಾದ ಅತಿದೊಡ್ಡ ಪಾಲಿಕೆ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯ ಮತ ಎಣಿಕೆ ಇನ್ನೇನು ಕೊಲೆಗೊಳ್ಳಳಿದ್ದು, ಬಿಜೆಪಿ ಭರ್ಜರಿ ಮುನ್ನಡ ಸಾಧಿಸಿದೆ. ಮುಂಬೈ ಮಹಾನಗರ ಪಾಲಿಕೆ ಮತ ಎಣಿಕೆಯಲ್ಲಿ 224 ವಾರ್ಡ್ ಗಳ ಪೈಕಿ ಬಿಜೆಪಿ ಮೈತ್ರಿ 130 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದ್ರೆ ಕಾಂಗ್ರೆಸ್ ಮೈತ್ರಿ 13 , ಶಿವಸೇನೆ ಮೈತ್ರಿ 72 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ.








