ದಾವಣಗೆರೆ : ಡಿಸಿಎಂ ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ. ಸೂರ್ಯ ಪಥ ಬದಲಾಗಿದೆ, ಹಾಗೆ ನಮ್ಮ ಪಥ ಕೂಡ ಬದಲಾವಣೆ ಆಗಿದೆ. ನಮ್ಮ ಹೇಳಿಕೆಯಂತೆ ಸಂಕ್ರಾಂತಿಯಲ್ಲಿ ಬದಲಾವಣೆ ಆಗಿದೆ ಎಂದು ದಾವಣಗೆರೆಯಲ್ಲಿ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ನೀಡಿದರು.
ಹೊಸಬರು ಎಂಎಲ್ಎ ಆಗಲು ಡಿಕೆ ಶಿವಕುಮಾರ್ ಅವರೇ ಕಾರಣರಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ 7:30 ವರ್ಷ ಅಧಿಕಾರ ಮಾಡಿದ್ದಾರೆ ಡಿಕೆ ಶಿವಕುಮಾರ್ ಕೂಡ ಎರಡು ವರ್ಷ ಸಿಎಂ ಆಗಲಿ ಎಂಬುವುದು ನಮ್ಮ ಆಶಯ ಡಿಕೆ ಶಿವಕುಮಾರ್ಗೆ ಸಿಎಂ ಆಗಬೇಕೆಂಬ ಅಭಿಪ್ರಾಯ ಇತ್ತು ಅದರಂತೆ ಆಗುತ್ತಿದೆ ಡಿಕೆ ಶಿವಕುಮಾರ್ ಕೊಟ್ಟಿದೆ ಇದು ಉತ್ತಮ ಬೆಳವಣಿಗೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದೆ ಅದು ಸಕ್ಸಸ್ ಆಗಿದೆ.
ಇನ್ನು ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ಬೆಂಬಲಾಗರ ಹೇಳಿಕೆ ವಿಚಾರವಾಗಿ ಆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ನಾನು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಅಂದು ಹೇಳುತ್ತಿದ್ದೆ ಡಿಕೆ ಶಿವಕುಮಾರ್ ಸಿಎಂ ಆದರೆ ಸಚಿವ ಸಂಪುಟದಲ್ಲಿ ಬದಲಾವಣೆ ಆಗುತ್ತೆ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಸಿಕ್ಕರೆ ಅದು ಒಳ್ಳೆಯದು. ಸಚಿವ ಸ್ಥಾನ ಅಂತ ಅಲ್ಲ ಯಾವ ಸ್ಥಾನ ಕೊಟ್ಟರೂ ನಾನು ನಿಭಾಯಿಸುತ್ತೇನೆ. ಕಸ ಗುಡಿಸುವ ಕೆಲಸ ಕೊಟ್ಟರು ನಾನು ಮಾಡುತ್ತೇನೆ ಎಂದು ದಾವಣಗೆರೆಯಲ್ಲಿ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ನೀಡಿದರು.








