ಚಾಮರಾಜನಗರ : ಚಿರತೆಯೊಂದು ದನ ಕರುಗಳನ್ನು ಬೇಟೆಯಾಡುತ್ತಿದ್ದ ಬಿಸತ್ತ ವ್ಯಕ್ತಿ ಅದಕ್ಕೆ ವಿಷ ಹಾಕಿ ಕೊಲೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇದೀಗ ಚಾಮರಾಜನಗರ ಬಫರ್ ಅಧಿಕಾರಿಗಳು ಓರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನ ಚಾಮರಾಜನಗರ ತಾಲೂಕಿನ ಆಲೂರು ಹೊಮ್ಮ ಗ್ರಾಮದ ದೊರೆಸ್ವಾಮಿ( 60) ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಜಮೀನು ಸಮೀಪ ಚಿರತೆಯ ಕಳೇಬರ ಪತ್ತೆಯಾಗಿತ್ತು. 5-6 ವರ್ಷ ವಯಸ್ಸಿನ ಗಂಡು ಚಿರತೆ ಇದಾಗಿದ್ದು, ಇದರ ಸಾವಿಗೆ ವಿಷವೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು. ಅನುಮಾನದ ಹಿನ್ನೆಲೆ ದೊರೆಸ್ವಾಮಿಯನ್ನು ವಿಚಾರಿಸಿದಾಗ ಸತ್ಯಾಂಶ ಹೊರಬಂದಿದೆ.
ವಿಚಾರಣೆ ವೇಳೆ ಚಿರತೆಯು ಬೇಟೆಯಾಡಿದ್ದ ಮಾಂಸಕ್ಕೆ ವಿಷ ಬೆರೆಸಿ ಜಾನುವಾರುಗಳ ಸಾವಿಗೆ ಸೇಡು ತೀರಿಸಿಕೊಂಡಿರುವುದಾಗಿ ದೊರೆಸ್ವಾಮಿ ಬಾಯಿ ಬಿಟ್ಟಿದ್ದಾನೆ. ಚಿರತೆಗೆ ವಿಷ ಹಾಕಿ ಕೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, ಈ ಹಿನ್ನೆಲೆ ದೊರೆಸ್ವಾಮಿ ಎಂಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.








