ಚಿತ್ರದುರ್ಗ: ಬೈಕ್ ವೀಲ್ಹಿಂಗ್ ನಿಷೇಧವಿದ್ದರೂ, ಆ ನಿಯಮ ಮೀರಿ ವೀಲ್ಹಿಂಗ್ ಮಾಡಿದ್ದಂತ ವ್ಯಕ್ತಿಯನ್ನು ಹಿರಿಯೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬೈಪಾಸ್ ನಲ್ಲಿ ಇರುವಂತ ಹೊಸ ಫ್ಲೈ ಓವರ್ ರಸ್ತೆಯ ಸರ್ವೀಸ್ ರೋಡಿನಲ್ಲಿ ಪಲ್ಸರ್ ಬೈಕ್ ನಲ್ಲಿ ವೀಲ್ಹಿಂಗ್ ಮಾಡುತ್ತಿರೋದು ಹಿರಿಯೂರು ನಗರ ಠಾಣೆಯ ಪೊಲೀಸರ ಗಮನಕ್ಕೆ ಬಂದಿದೆ.
ಈ ವಿಷಯ ಗಮನಕ್ಕೆ ಬಂದ ಕೂಡಲೇ ಅಲರ್ಟ್ ಆದಂತ ಹಿರಿಯೂರು ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮೊಹಮ್ಮದ್ ಸಿರಾಜ್, ಹೆಡ್ ಕಾನ್ಸ್ ಸ್ಟೇಬಲ್ ರಮೇಶ್ ಹಾಗೂ ಕಾನ್ಸ್ ಸ್ಟೇಬಲ್ ರಾಘವೇಂದ್ರ ಕೂಡಲೇ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಆಟೋ ಚಾಲಕನಾಗಿದ್ದ ಹಿರಿಯೂರು ನಗರದ ಕೌಶಿಕ್ ಎಂಬುದಾಗಿ ಗುರುತಿಸಲಾಗಿದೆ. ಈತ ರಾಷ್ಟ್ರೀಯ ಹೆದ್ದಾರಿ 48ರಿಂದ ಹುಲುಗಲಕುಂಟೆ ಕಡೆಗೆ ತಲೆಗೆ ಹೆಲ್ಮೆಟ್ ಧರಿಸದೇ ಅಜಾಗರೂಕತೆಯಿಂದ ವೀಲ್ಹಿಂಗ್ ಮಾಡುತ್ತಿದ್ದನು.
ಬಂಧಿತ ಆರೋಪಿ ಕೌಶಿಕ್ ವಿರುದ್ಧ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ ಕಾಯ್ದೆಯ ಕಲಂ 129, 189, 194(ಡಿ) ಹಾಗೂ ರೆ/ವಿ 177 ಐಎಂವಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವೀಲ್ಹಿಂಗ್ ಗೆ ಬಳಸಿದಂತ ಪಲ್ಸರ್ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಹಿರಿಯೂರು ನಗರ ಪೊಲೀಸ್ ಠಾಣೆಯ ಪೊಲೀಸರ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಶ್ಲಾಘಿಸಿದ್ದಾರೆ.
ವರದಿ; ವಸಂತ ಬಿ ಈಶ್ವರೆಗೆರ… ಸಂಪಾದಕರು..
BREAKING: ತಾಯಿ ಜೊತೆ ಜಗಳವಾಡುತ್ತಿದ್ದ ಮಲತಂದೆಗೆ ಮಗನಿಂದ ಮಚ್ಚಿನೇಟು, ಮಾರಣಾಂತಿಕ ಹಲ್ಲೆ
ರಾಜ್ಯ ರಾಜಕಾರಕ್ಕೆ ಬರುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಹತ್ವದ ಹೇಳಿಕೆ








