ಬೆಂಗಳೂರು : ನಟೋರಿಯಸ್ ರೌಡಿಶೀಟರ್ ಗುಬ್ಬಚ್ಚಿ ಸೀನನ ವಿರುದ್ಧ ಕೋಕ ಕಾಯ್ದೆ ದಾಖಲಾಗಿದೆ. ಜೊತೆಗೆ ರೌಡಿಶೀಟರ್ ಕಾರ್ತಿಕ್ ಮೇಲು ಕೂಡ ಪೊಲೀಸರು ಇದೀಗ ಕೋಕಾ ಅಸ್ತ್ರ ಪ್ರಯೋಗಿಸಿದ್ದಾರೆ. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿರುವ ಗುಬ್ಬಚಿ ಸೀನ ಇತ್ತೀಚಿಗೆ ಅಷ್ಟೇ ಜೈಲಿನಲ್ಲಿ ಸಾಕಷ್ಟು ಸುದ್ದಿಯಾಗಿದ್ದ. ಅಲ್ಲದೇ ಜೈಲಲ್ಲೇ ಅದ್ದೂರಿಯಾಗಿ ಹುಟ್ಟುಬ್ಬ ಆಚರಿಸಿದ್ದ.
ಜೈಲಿನಲ್ಲಿ ಮದ್ಯ ಸೇವನೆ ಮಾಡಿದ ಫೋಟೋ ಕೂಡ ವೈರಲಾಗಿತ್ತು. ಸಂಘಟಿತ ಅಪರಾಧ ಕೃತ್ಯಗಳಲ್ಲಿ ಪದೇಪದೇ ಬಾಗಿಯಾದ ಹಿನ್ನೆಲೆಯಲ್ಲಿ ಪೊಲೀಸರು ಆತನ ವಿರುದ್ಧ ಕೋಕಾ ಕಾಯಿದೆ ಅಸ್ತ್ರ ಪ್ರಯೋಗಿಸಿದ್ದಾರೆ. ಜೈಲಿನಲ್ಲಿಯೇ ಇದ್ದುಕೊಂಡು ಬಿಲ್ಡರ್ ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ವರ್ತೂರು ಪೊಲೀಸ್ ಠಾಣೆಯಲ್ಲಿ ಬಿಲ್ಡರ್ ಗುಬ್ಬಚ್ಚಿ ಸೀನನ ವಿರುದ್ಧ ದೂರದ ದಾಖಲಿಸಿದ್ದರು.
ಪ್ರಕರಣದ ತನಿಖೆಯನ್ನು ವೈಟ್ಫೀಲ್ಡ್ ವಿಭಾಗದ ACP ರೀನಾ ತನಿಖೆ ನಡೆಸಿದ್ದರು. ತನಿಖೆಯಲ್ಲಿ ಗುಬ್ಬಚ್ಚಿ ಸೀನಾ ಮತ್ತು ಕಾರ್ತಿಕ್ ಬೆದರಿಕೆ ಹಾಕಿರುವುದು ಪತ್ತೆಯಾಗಿದೆ ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪೊಲೀಸರು ಕೋಕಾ ಆಕ್ಟ್ ದಾಖಲಿಸಿದ್ದಾರೆ.








