ಹಾಸನ : ಹಾಸನದಲ್ಲಿ ಯಶ್ ತಾಯಿ ಪುಷ್ಪಗೆ ಸೇರಿದ ನಿವೇಶನ ವ್ಯಾಜ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಯಶ್ ತಾಯಿ ಪುಷ್ಪ ವಿರುದ್ಧ ಸೈಟ್ ಒತ್ತುವರಿ ಆರೋಪ ಕೇಳಿ ಬಂದಿತ್ತು. ಈ ಕೇಸ್ ಸಂಬಂಧ ನ್ಯಾಯಾಲಯದ ಆದೇಶಕ್ಕೆ ತಡೆಕೋರಿದ್ದ ಪುಷ್ಪಗೆ ಇದೀಗ ಹಿನ್ನಡೆಯಾಗಿದ್ದು, ಪ್ರಕರಣದಲ್ಲಿ ಪುಷ್ಪಗೆ ಮಧ್ಯಂತರ ನಿರ್ಬಂಧಕಾಜ್ಞೆ ನೀಡಲು ಕೋರ್ಟ್ ನಿರಾಕರಿಸಿದೆ.
ಹಾಸನದ ವಿದ್ಯಾನಗರದಲ್ಲಿರುವ ನಟ ಯಶ್ ತಾಯಿ ಪುಷ್ಪ ಮನೆ ಬಳಿ ಸೈಟ್ ತಮ್ಮದೆಂದು ದೇವರಾಜ ಎನ್ನುವವರು ಕೋರ್ಟ್ ಮೆಟ್ಟಿಲೇರಿದ್ದರು. ಮೈಸೂರಿನ ಲಕ್ಷ್ಮಮ್ಮ ಪರವಾಗಿ ದೇವರಾಜ್ ಜಿಪಿಎ ಪಡೆದಿದ್ದರು. ಪ್ರಕರಣದ ವಿಚಾರಣೆ ನಡೆಸಿ ಲಕ್ಷ್ಮಮ್ಮ ಅವರ ಶಾಂತಿಯುತ ಸ್ವಾಧೀನಕ್ಕೆ ಯಾರು ಅಡ್ಡಿಯಾಗದಂತೆ ಹಾಸನದ ಜೆಎಂಎಫ್ಸಿ ಕೋರ್ಟ್ ಆದೇಶ ನೀಡಿತ್ತು. ಜನವರಿ 4ರಂದು ಸೈಟಿಗೆ ಹಾಕಲಾಗಿದ್ದ ಕಾಂಪೌಂಡನ್ನು ದೇವರಾಜ್ ತೆರವು ಮಾಡಿದ್ದರು.
6 ವರ್ಷಗಳ ಹಿಂದೆ ಯಶ್ ತಾಯಿ ಪುಷ್ಪ ನಿವೇಶನ ಖರೀದಿಸಿದ್ದರು. ತಮ್ಮ ಮನೆಯ ಪಕ್ಕದ ನಿವೇಶನ ಖರೀದಿಸಿದ ಯಶ್ ತಾಯಿ ಪುಷ್ಪ ನಿವೇಶನ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಕೋರ್ಟ್ more ಹೋಗಲಾಗಿತ್ತು. ಜಿಪಿಎ ಹೋಲ್ಡರ್ ದೇವರಾಜ್ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಆದೇಶಕ್ಕೆ ಶಾಶ್ವತ ತಡೆಕೋರಿ ಪುಷ್ಪ ಮತ್ತು ನಟರಾಜ್ ಅರ್ಜಿ ಸಲ್ಲಿಸಿದ್ದರು. ಹಾಸನದ ನಾಲ್ಕನೇ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಪ್ರತ್ಯೇಕವಾಗಿ 2 ಕೇಸ್ ದಾಖಲಿಸಿ ನಿರ್ಬಂಧಕಾಜ್ಞೆ ಕೋರಿದ್ದರು. ಎರಡು ಪ್ರಕರಣದಲ್ಲಿ ಕೋರ್ಟ್ ಅರ್ಜಿದಾರರ ಮನವಿ ಪುರಸ್ಕರಿಸಿಲ್ಲ. ನ್ಯಾಯಾಲಯಕ್ಕೆ ಹಾಜರಾಗಲು ಪ್ರಕರಣದ ಪ್ರತಿವಾದಿಗಳಿಗೆ ನೋಟಿಸ್ ನೀಡಿದ್ದು ಜನವರಿ 31ರಂದು ಕೋರ್ಟಿಗೆ ಹಾಜರಾಗಲು ನೋಟಿಸ್ ಜಾರಿಗೆ ಆದೇಶ ನೀಡಿದೆ. ಜಿಪಿಎ ಹೋಲ್ಡರ್ ದೇವರಾಜುಗೆ ನೋಟಿಸ್ ಜಾರಿಗೆ ಕೋರ್ಟ್ ಆದೇಶ ನೀಡಿದೆ.








