ಬೆಂಗಳೂರು : RCB ಅಭಿಮಾನಿಗಳಿಗೆ ಇದೀಗ ಬಿಗ್ ಶಾಕ್ ಎದುರಾಗಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮ್ಯಾಚ್ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. KSCA ಹಾಗೂ RCB ನಡುವೆ ಇದೀಗ ತಿಕ್ಕಾಟ ನಡೆಯುತ್ತಿದ್ದು ವೆಂಕಟೇಶ್ ಪ್ರಸಾದ್ ಮತ್ತು ರಾಜೇಶ್ ನಡುವೆ ವಾಗ್ವಾದ ನಡೆದಿದೆ.
ಬೆಂಗಳೂರಿನಲ್ಲಿ ಪಂದ್ಯ ನಡೆಸೋಕೆ ಆರ್ಸಿಬಿ ಹಿಂದೆಟು ಹಾಕುತ್ತಿದೆ. ಪ್ರಕರಣದಿಂದ ಆರ್ಸಿಬಿ ಮ್ಯಾನೇಜ್ಮೆಂಟ್ ಇದೀಗ ಆತಂಕಕ್ಕೆ ಒಳಗಾಗಿದ್ದು, ಪಂದ್ಯ ನಡೆಸಲು ಮ್ಯಾನೇಜ್ಮೆಂಟ್ ಹಿಂಜರಿಯುತ್ತಿದೆ. ಹಾಗಾಗಿ ಆರ್‌ಸಿಬಿ ಎಲ್ಲ ಪಂದ್ಯಗಳನ್ನು ರಾಯಪುರ ಮತ್ತು ಮುಂಬೈಗೆ ಶಿಫ್ಟ್ ಮಾಡಲು ರಾಜೇಶ್ ಮೆನನ್ ನಿರ್ಧರಿಸಿದ್ದಾರೆ.ಆರ್ಸಿಬಿ ತಂಡದ ಉಪಾಧ್ಯಕ್ಷ ಆಗಿರುವ ರಾಜೇಶ ಮೆನನ್ ಪ್ಲಾನ್ ಮಾಡಿದ್ದು, ಆದರೆ ರಾಜ್ಯ ಸರ್ಕಾರ ಆರ್ಸಿಬಿ ಪಂದಕ್ಕೆ ಸಮ್ಮತಿ ನೀಡಲು ತಯಾರಿ ನಡೆಸಿದೆ.
ಇನ್ನು KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ರಾಜೇಶ್ ಮೆನನ್ ನಡುವೆ ವಾಗ್ವಾದ ನಡೆದಿದ್ದು, ಆರ್‌ಸಿಬಿ ಪಂದ್ಯ ಶಿಫ್ಟ್ ಮಾಡದಂತೆ ವೆಂಕಟೇಶ್ ಪ್ರಸಾದ್ ಪಟ್ಟು ಹಿಡಿದಿದ್ದಾರೆ. ಬೆಂಗಳೂರಿನಿಂದ ಆರ್ಸಿಬಿ ಪಂದ್ಯಗಳನ್ನು ಮಾಡಿದಂತೆ ಪಟ್ಟು ಹಿಡಿದಿದ್ದಾರೆ ಸ್ಟೇಡಿಯಂ ನಲ್ಲಿ ಎಲ್ಲಾ ವರ್ಕ್ ಮಾಡಿದ್ದೇವೆ ಎಂದಿದ್ದಾರೆ. ಇನ್ನೊಂದು ಕಡೆ ರಾಜೇಶ್ ಮೆನನ್ ಕೆಎಸ್ಇಎ ಇಂದಲೇ ಆತಂಕ ಇದೆ ಎಂದು ಆರೋಪಿಸಿದ್ದಾರೆ.








