ಬೆಳಗಾವಿ : ವಾಲ್ಮೀಕಿ ಭವನ ನಿರ್ಮಾಣದ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದೆ. ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ವಿರೋಧಿಸಿದ್ದಕ್ಕೆ ದೌರ್ಜನ್ಯ ನಡೆದಿದ್ದು ದಲಿತ ಸಮುದಾಯದ ಸದಾಶಿವ ಭಜಂತ್ರಿ ಕುಟುಂಬದವರ ಮೇಲೆ ಹಲ್ಲೆ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರಿನಲ್ಲಿ ಈ ಒಂದು ಘಟನೆ ನಡೆದಿದೆ.
ಗ್ರಾಮದ ಸದಾಶಿವ ಭಜಂತ್ರಿ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಕಲ್ಲು ಎಸೆದು ಶೌಚಾಲಯ, ಮನೆ, ಮಾಳಿಗೆ ದ್ವಂಸ ಮಾಡಿದ್ದಾರೆ. ವಾಲ್ಮೀಕಿ ಭವನ ನಿರ್ಮಾಣದ ಜಾಗ ಸರ್ವೆಗೆ ಎಸ್ ಟಿ ಸಮುದಾಯದ ಯುವಕರು ಬಂದಿದ್ದರು. ಈ ವೇಳೆ ವಾಲ್ಮೀಕಿ ಸಮುದಾಯ ಭವನಕ್ಕೆ ಸದಾಶಿವ ಭಜಂತ್ರಿ ಕುಟುಂಬ ವಿರೋಧ ಮಾಡಿತ್ತು.
ಆಗ ಸಮುದಾಯ ಭವನಕ್ಕೆ ವಿರೋಧಿಸಿದ್ದಕ್ಕೆ ಸದಾಶಿವ ಭಜಂತ್ರಿ ಕುಟುಂಬದವರ ಮೇಲೆ ಹಲ್ಲೆ ಮಾಡಿದೆ. ಸದಾಶಿವ ಮನೆಯಲ್ಲಿದ್ದ ವಸ್ತುಗಳನ್ನು ಕಿಡಿಗೇಡಿಗಳು ಪುಡಿಪುಡಿ ಮಾಡಿದ್ದಾರೆ. ಕಲ್ಲು ಕಟ್ಟಿಗೆಯಿಂದ ಹೊಡೆದು ಬಾಗಿಲು ಮುರಿದು ಒಳ ನುಗ್ಗಿ ಹಲ್ಲೆ ಮಾಡಿದ್ದಾರೆ. ಮಹಿಳೆ ಅನ್ನೋದನ್ನ ಲೆಕ್ಕಿಸಿದೆ ಆವಾಚ್ಯವಾಗಿ ನಿಂದನೆ ಮಾಡಿದ್ದಾರೆ.
ವಿಷಯ ತಿಳಿದ ತಕ್ಷಣ ಗ್ರಾಮಕ್ಕೆ ಸ್ಥಳಕ್ಕೆ ಬೆಳಗಾವಿ ಎಸ್ ಪಿ ಕೆ ರಾಮರಾಜನ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ವಿಡಿಯೋ ಪರಿಶೀಲಿಸಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್.ಪಿ ತಿಳಿಸಿದರು. ಸದ್ಯ ದೇಶನೂರು ಗ್ರಾಮ ಬೂದಿ ಮುಚ್ಚಿದ ಕೆಂಡದಂತಾಗಿದೆ. ನೇಸರಗಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








