ರಾಯಚೂರು : ರಾಯಚೂರಿನ ತಿಂಥಣಿಯ ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮಾನಂದ ಶ್ರೀ ನಿಧನರಾಗಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿ ಬಳಿ ಇರುವ ಮಠದಲ್ಲಿ ಸಿದ್ದರಾಮಾನಂದ ಶ್ರೀಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇಂದು ಬೆಳಿಗ್ಗೆ 3:40ರ ಸುಮಾರಿಗೆ ಸ್ವಾಮೀಜಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ರಾಯಚೂರು ಜಿಲ್ಲೆಯ ಲಿಂಗಸುಗೂರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿತರಿಳೆದಿದ್ದಾರೆ. ಜನವರಿ 12, 13 ಮತ್ತು 14 ರಂದು ಹಾಲುಮತದ ಉತ್ಸವ ನಡೆಸಿಕೊಟ್ಟಿದ್ದರು.2023-24 ರಲ್ಲಿ ಇದೆ ಮಠದ ಉತ್ಸವವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು.








