ಬೆಂಗಳೂರು : ಮಕರ ಸಂಕ್ರಾಂತಿ ಅಂಗವಾಗಿ ರಾಜ್ಯದ ಎಲ್ಲ ದೇಗುಲಗಳಲ್ಲಿ ಎಳ್ಳು ಬೆಲ್ಲ ವಿತರಣೆಗೆ ಧಾರ್ಮಿಕ ದತ್ತಿ ಇಲಾಖೆಯ ಎಲ್ಲಾ ದೇಗುಲಗಳಿಗೆ ಇದೀಗ ಸುತ್ತೋಲೆ ಹೊರಡಿಸಲಾಗಿದೆ. ದೇವರ ದರ್ಶನಕ್ಕೆ ಬರುವ ಎಲ್ಲಾ ಭಕ್ತರಿಗೆ ಎಳ್ಳು ಬೆಲ್ಲವಿಕರಿಸಬೇಕು ದೇವರಿಗೆ ನೈವೇದ್ಯ ಅರ್ಪಿಸಿದ ನಂತರ ಭಕ್ತರಿಗೆ ಎಳ್ಳು ಬೆಲ್ಲ ವಿತರಿಸಬೇಕು.
ಸರ್ಕಾರದ ಲಾಂಛನ ಮುದ್ರಿಸಿದ ಕಾಗದ ಲಕೋಟೆಯಲ್ಲಿ ವಿತರಿಸಿ. ಪ್ರತಿಯೊಬ್ಬರಿಗೆ ಕನಿಷ್ಠ 50 ಗ್ರಾಂ ಎಳ್ಳು ಬೆಲ್ಲ ನೀಡುವಂತೆ ಸೂಚನೆ ನೀಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಎಲ್ಲಾ ದೇಗುಲಗಳಿಗೆ ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ. ಹಾಗಾಗಿ ಎಲ್ಲಾಧಿ ಗುಣಗಳಲ್ಲಿ ಬರುವ ಭಕ್ತಾದಿಗಳಿಗೆ 50 ಗ್ರಾಂ ಎಳ್ಳುಬೆಲ್ಲ ವಿತರಿಸಬೇಕು ಎಂದು ಸೂಚಿಸಲಾಗಿದೆ.








