ಬೆಂಗಳೂರು : ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಪ್ರತಿವರ್ಷದಂತೆ ಈ ವರ್ಷವೂ ಗವಿಗಂಗಾಧರ ದೇವಾಲಯ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಸಂಕ್ರಾತಿಯಂದು ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಸಂಚಲನ ಮಾಡುವ ಶುಭಘಳಿಗೆ.
ಈ ವೇಳೆ ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವನ ಮೂರ್ತಿಯನ್ನು ಸೂರ್ಯನ ಕಿರಣಗಳು ಸ್ಪರ್ಶಿಸಲಿವೆ. ಇದನ್ನು ಶಿವನಿಗೆ ಸೂರ್ಯದೇವ ಸಲ್ಲಿಸೋ ಪೂಜೆ ಅಂತಾ ನಂಬಿಕೆಯಿದ್ದು, ಈ ಬಾರಿ ಸಂಜೆ 5:02 ರಿಂದ 5:04ರವರೆಗೆ ಅಂದರೆ ಎರಡು ನಿಮಿಷಗಳ ಕಾಲ ಶಿವನಿಗೆ ಭಾಸ್ಕರ ನಮಿಸಲಿದ್ದಾನೆ.
ಇದನ್ನು ‘ಸೂರ್ಯನ ಅಭಿಷೇಕ’ ಎಂದೇ ಕರೆಯಲಾಗುತ್ತದೆ. ಈ ಕಿರಣಗಳು ನಂದಿಯ ಕೊಂಬುಗಳ ಮಧ್ಯದಿಂದ ಹೋಗಿ ಗರ್ಭಗುಡಿಯೊಳಗಿರುವ ಶಿವಲಿಂಗವನ್ನು ತಲುಪುವ ಮೂಲಕ ದೇವಸ್ಥಾನವನ್ನು ಬೆಳಗಿಸುತ್ತದೆ. ಈ ಪವಾಡವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಅನೇಕ ಭಾಗಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಈ ಪವಾಡವನ್ನು 5 ರಿಂದ 10 ನಿಮಿಷಗಳ ಕಾಲ ನಡೆಯುತ್ತದೆ.
ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷದಂತೆ, ಸೂರ್ಯ ರಶ್ಮಿಗಳು ಶಿವಲಿಂಗವನ್ನು ಸ್ಪರ್ಶಿಸುವ ಅಪರೂಪದ ಸನ್ನಿವೇಶವು ಈ ವರ್ಷ ಸಂಜೆ 5:2 ರಿಂದ 5:5 ರವರೆಗೆ ನಡೆಯಲಿದೆ. ಸೂರ್ಯನ ಕಿರಣಗಳು ಶಿವಲಿಂಗದ ಪಾದದಿಂದ ಕೇಶದವರೆಗೆ ಸ್ಪರ್ಶಿಸುತ್ತವೆ. ಧನುರ್ಮಾಸದ ಪೂಜೆಯು ಇಂದು ಕೊನೆಗೊಳ್ಳಲಿದ್ದು, ಜನವರಿ 15ರಂದು ವಿಶೇಷ ಅಭಿಷೇಕಗಳು ನಡೆಯಲಿವೆ. ಭಕ್ತರಿಗೆ ಸೂರ್ಯ ರಶ್ಮಿ ಸ್ಪರ್ಶದ ನೇರ ದರ್ಶನಕ್ಕಾಗಿ ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ.








