ನವದೆಹಲಿ : ‘ರಾಹುಕೇತು’ ಚಿತ್ರದಲ್ಲಿ ಕಾಂತಾರ ದೈವದ ಕೂಗಿನ ಅನುಕರಣೆಗೆ ಬ್ರೇಕ್ ಹಾಕಲಾಗಿದೆ. ಸಿನಿಮಾದಲ್ಲಿ ದೈವದ ಧ್ವನಿಗೆ ಸೆನ್ಸಾರ್ ಮಂಡಳಿ ಇದೀಗ ಬ್ರೇಕ್ ಹಾಕಿದೆ. ಪುಲ್ಕಿತ್ ಸಾಮ್ರಾಟ್ ಹಾಗು ವರುಣ್ ಶರ್ಮ ಅಭಿನಯದ ರಾಹುಕೇತು ಚಿತ್ರದಲ್ಲಿ ಕಾಂತಾರ ಚಿತ್ರದ ದೈವದ ಕೂಗನ್ನು ಈ ಚಿತ್ರದಲ್ಲಿ ಬಳಸಲಾಗಿತ್ತು.
ಇದೀಗ ಈ ಶಬ್ದವನ್ನು ಬದಲಿಸುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ. ಚಿತ್ರದಲ್ಲೇ ಮಧ್ಯದ ಬೆರಳು ತೋರಿಸಲಾಗಿದೆ. ಮಧ್ಯದ ಬೆರಳಿನ ಸನ್ನೆ ಬದಲಿಸಲು ಸೂಚನೆ ನೀಡಿದೆ. ಚಿತ್ರದಲ್ಲಿ ಬಳಸಿದ ಸಂಸ್ಕೃತ ಶ್ಲೋಕಕ್ಕೆ ದೃಢೀಕರಣ ಪತ್ರ ಸಲ್ಲಿಸಲು ಸೂಚನೆ ನೀಡಿದೆ. ಜನವರಿ 16ರಂದು ರಾಹುಕೇತು ಸಿನಿಮಾ ಬಿಡುಗಡೆ ಆಗಲಿದೆ.








