ಬಳ್ಳಾರಿ : ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರ ಮನೆಯ ಮುಂದೆ ಬ್ಯಾನರ್ ಕಟ್ಟುವ ವಿಚಾರವಾಗಿ ಗಲಾಟೆ ನಡೆದು ಘರ್ಷಣೆ ವೇಳೆ ಪೈರಿಂಗ್ ಆಗಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದ. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಜನವರಿ 17 ರಿಂದ ಫೆಬ್ರವರಿ 5 ರವರೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಬಹುತೇಕ ಫಿಕ್ಸ್ ಆದಂತಾಗಿದೆ.
ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದ ಅವರು, ಒಂದೆರಡು ದಿನದಲ್ಲಿ ಪಾದಯಾತ್ರೆ ಬಗ್ಗೆ ಮಾಹಿತಿ ಸಿಗುತ್ತದೆ ಕೇವಲ ಶ್ರೀರಾಮಲು ಮತ್ತು ರೆಡ್ಡಿ ಅಭಿಪ್ರಾಯ ಮಾತ್ರ ಅಲ್ಲ ಬಿಜೆಪಿ ವರಿಷ್ಠರ ಜೊತೆ ಈಗಾಗಲೇ ಮಾತನಾಡಿದ್ದೇನೆ. ನಮ್ಮೆಲ್ಲರ ಅಭಿಪ್ರಾಯ ಕೂಡ ಪಾದಯಾತ್ರೆಯ ಪರವಾಗಿದೆ. ಬಿಜೆಪಿ ವರಿಷ್ಠರ ಜತೆಗೆ ಈಗಾಗಲೇ ಮಾತನಾಡಿದ್ದೇನೆ ಮೊದಲ ಹಂತದಲ್ಲಿ ಜನವರಿ 17ಕ್ಕೆ ಬಳ್ಳಾರಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ಬಳ್ಳಾರಿ ಪಾದಯಾತ್ರೆಗೆ ಇದೀಗ ರೂಟ್ ಮ್ಯಾಪ್ ಕೂಡ ರೆಡಿಯಾಗಿದೆ 20 ದಿನಗಳ ಪಾದಯಾತ್ರೆಗೆ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಪ್ಲಾನ್ ಮಾಡಿದ್ದಾರೆ ಬಳ್ಳಾರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆಗೆ ಪ್ಲಾನ್ ಮಾಡಿದ್ದಾರೆ ಬೆಂಗಳೂರಿನ ಅರಮನೆ ಮೈದಾನದವರೆಗೆ ಪಾದಯಾತ್ರೆಗೆ ತಯಾರಿ ಮಾಡಿದ್ದಾರೆ ಪ್ರತಿದಿನ ಗರಿಷ್ಠ ಕಿಲೋಮೀಟರ್ ವರೆಗೆ ಪಾದಯಾತ್ರೆಗೆ ಪ್ಲಾನ್ ಮಾಡಲಾಗಿದ್ದು ಜನವರಿ 17ರ ವರೆಗೆ ಗ್ರೀನ್ ಸಿಗ್ನಲ್ ಸಿಗುವ ನಿರೀಕ್ಷೆ ಇದೆ.
ಇನ್ನು ಜನವರಿ 17 ರಿಂದ ಫೆಬ್ರವರಿ ಐದರವರೆಗೆ 20 ದಿನಗಳ ಕಾಲ ಪಾದಯಾತ್ರೆಗೆ ಪ್ಲಾನ್ ಮಾಡಿದ್ದಾರೆ. ಬಳ್ಳಾರಿಯಲ್ಲಿ 2 ದಿನ ಚಿತ್ರದುರ್ಗದಲ್ಲಿ 10 ದಿನ ತುಮಕೂರಿನಲ್ಲಿ 5 ದಿನ ಮತ್ತು ಬೆಂಗಳೂರಿನಲ್ಲಿ 2 ದಿನ ಹೀಗೆ ನಾಲ್ಕು ಜಿಲ್ಲೆಗಳಲ್ಲಿ ಬಳ್ಳಾರಿ ಪಾದಯಾತ್ರೆ ಸಾಗಲಿದೆ. ಈಗಾಗಲೇ ರೂಟ್ ಮ್ಯಾಪ್ ಸಿದ್ಧಪಡಿಸಿದ್ದು ಇನ್ನೂ ಹೈಕಮಾಂಡ್ ಗ್ರೀನ್ ಸಿಗ್ನಲ್ ಮಾತ್ರ ಸಿಗುವುದು ಬಾಕಿ ಇದೆ. ಹಾಗಾಗಿ ಜನವರಿ 17ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು ಅನುಮತಿ ಸಿಕ್ಕರೆ ಅಂದಿನಿಂದಲೇ ಬೆಂಗಳೂರಿನ ಅರಮನೆಯವರಿಗೆ ಪಾದಯಾತ್ರೆ ಆರಂಭವಾಗಲಿದೆ.








