ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚಿರತೆಗಳ ಕಾಟ ಇದೀಗ ಮತ್ತೆ ಹೆಚ್ಚಾಗಿದ್ದು, ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲದಲ್ಲಿ ತಡರಾತ್ರಿ ನಾಯಿಯ ಮೇಲೆ ಚಿರತೆ ಒಂದು ದಾಳಿ ಮಾಡಿರುವ ಘಟನೆ ಇದೀಗ ವರದಿಯಾಗಿದೆ.
ಹೌದು ನೆಲಮಂಗಲದಲ್ಲಿ ಚಿರತೆ ದಾಳಿ ಇದೀಗ ಮಿತಿಮೀರಿದ್ದು, ಹೇಮಗಂಗಾ ಬಡಾವಣೆ ಜನರಲ್ಲಿ ಆತಂಕ ಮನೆ ಮಾಡಿದೆ. ದೊಣ್ಣೆ ಹಿಡಿದು ಜನರು ರಾತ್ರಿ ಕಾವಲು ಕಾಯುತ್ತಿರುವ ಪರಿಸ್ಥಿತಿ ಬಂದಿದೆ. ರಕ್ಷಣೆಗಾಗಿ ಬಡಾವಣೆಯ ಜನರು ದೊಣ್ಣೆಗಳ ಮೊರೆ ಹೋಗಿದ್ದಾರೆ ಬಡಾವಣೆಯಲ್ಲಿರುವ ನಾಯಿಗಳ ಮೇಲೂ ಚಿರತೆಗಳು ದಾಳಿ ಮಾಡಿವೆ. ನಾಯಿಗಳನ್ನು ಚಿರತೆಯಿಂದ ರಕ್ಷಿಸಲು ಜನರು ಮುಂದಾಗಿದ್ದಾರೆ.








