ಬೆಂಗಳೂರು : ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳನ್ನು ಮಾರ್ಚ್ 31ರಂದೇ ತೀರ್ಣಗೊಳಿಸಿ ಲೆಕ್ಕವನ್ನು ಮುಕ್ತಾಯಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
2024-25 ನೇ ಸಾಲಿನ ವರ್ಷಾಂತ್ಯದ ಬಿಲ್ಲುಗಳನ್ನು ಖಜಾನೆಗಳಲ್ಲಿ ಸ್ವೀಕರಿಸಿ, ತೀರ್ಣಗೊಳಿಸಿ ದಿನಾಂಕ:31.03.2025 ರಂದೇ 2024-25 ನೇ ಸಾಲಿನ ಲೆಕ್ಕಗಳನ್ನು ಮುಕ್ತಾಯಗೊಳಿಸಲು ಉಲ್ಲೇಖ (1)ರ ಸರ್ಕಾರಿ ಆದೇಶ ಮತ್ತು ತದನಂತರದ ಆದೇಶಗಳಲ್ಲಿ ಕಾಲಮಿತಿ ಸೂಚಿಸಿ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿತ್ತು.
2025-26 ನೇ ಸಾಲಿನ ವರ್ಷಾಂತ್ಯದ ಬಿಲ್ಲುಗಳನ್ನೂ ಸಹ ಖಜಾನೆಗಳಲ್ಲಿ ಸ್ವೀಕರಿಸಿ ತೀರ್ಣಗೊಳಿಸಿ, ದಿನಾಂಕ:31.03.2026 ರಂದೇ 2025-26 ನೇ ಸಾಲಿನ ಲೆಕ್ಕಗಳನ್ನು ಮುಕ್ತಾಯಗೊಳಿಸಲು ಸೂಕ್ತ ವೇಳಾಪಟ್ಟಿಯನ್ನು ನೀಡಿ ಸಾಕಷ್ಟು ಮುಂಚಿತವಾಗಿ ಆದೇಶವನ್ನು ಹೊರಡಿಸುವುದು ಅವಶ್ಯವಿದೆಯೆಂದು ಖಜಾನೆ ಆಯುಕ್ತರು ಮೇಲೆ ಉಲ್ಲೇಖ(2)ರಲ್ಲಿ ಓದಲಾದ ಕಡತದಲ್ಲಿ ಸರ್ಕಾರವನ್ನು ಕೋರಿದ್ದಾರೆ. ಆದ್ದರಿಂದ ಈ ಆದೇಶ.
ಸರ್ಕಾರಿ ಆದೇಶ ಸಂಖ್ಯೆ: ಆಇ 56 ಬಿಪಿಇ 2025 ಬೆಂಗಳೂರು, ದಿನಾಂಕಃ12.01.2026
ಆಡಳಿತ ಇಲಾಖೆಗಳು ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ನಿಗದಿಗೊಳಿಸಿರುವ ಕಾಲಮಿತಿ ಈ ಕೆಳಗಿನಂತಿದೆ:









