ಗದಗ : ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ದೊರೆತ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ಬಾಲಕ ಪ್ರಜ್ವಲ್ ಗೆ ಇದೀಗ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ಬಿಹೆಚ್ ಪಾಟೀಲ್ ಪದವಿ ಪೂರ್ವ ಕಾಲೇಜು ಘೋಷಣೆ ಮಾಡಿದೆ.
ಈ ಕುರಿತು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸಿದ್ದಲಿಂಗಯ್ಯ ಪಾಟೀಲ್ ಭರವಸೆ ನೀಡಿದ್ದಾರೆ. ಪ್ರಜ್ವಲ್ ಗೆ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಆತ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ನಿನ್ನೆ ನಮ್ಮ ಎಲ್ಲಾ ಆಡಳಿತ ಮಂಡಳಿ ಸೇರಿ ಅವನಿಗೆ ಸನ್ಮಾನಿಸಿದ್ದೇವೆ. ಪಿಯುಸಿ ದ್ವಿತೀಯ ವರ್ಷದವರೆಗೂ ನಮ್ಮ ಕಾಲೇಜಿನಲ್ಲಿ ಆತನಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ನಿರ್ಣಯ ಮಾಡಿದ್ದೇವೆ ಎಂದು ತಿಳಿಸಿದರು.








