ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ಹಿಂಪಡೆಯುವಂತೆ ಮಕ್ಕಳ ಹಕ್ಕುಗಳ ಆಯೋಗ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಪತ್ರ ಬರೆದಿದೆ.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಟಾಕ್ಸಿಕ್ ಚಿತ್ರದ ಟೀಸರ್ ಹಿಂಪಡೆಯುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಪತ್ರ ಬರೆದಿದೆ. ಟಾಕ್ಸಿಕ್ ಟೀಸರ್ ನಿಂದ ಮಕ್ಕಳ ಮಾನಸಿಕ ಬೆಳವಣಿಗೆಗೆ ಧಕ್ಕೆ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳಿಗೆ ತೊಂದರೆಯಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಟ ಯಶ್ ಅಭಿನಯದ ಟ್ಯಾಕ್ಸಿಕ್ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಈ ಟೀಸರ್ ನಲ್ಲಿ ಅಶ್ಲೀಲ ಕಂಟೆಂಟ್ ಇದೆ, ಮಕ್ಕಳ ಸ್ವಾಸ್ಥಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಹೈಕೋರ್ಟ್ ವಕೀಲ ಲೋಹಿತ್ ಹನುಮಾಪುರ ದೂರು ಸಲ್ಲಿಸಿದ್ದಾರೆ. ವಕೀಲಯ ದೂರು ಸ್ವೀಕರಿಸಿರುವ ಮಕ್ಕಳ ಹಕ್ಕುಗಳ ಆಯೋಗವು ಕ್ರಮ ಕೈಗೊಂಡಿದೆ.








