ಕಲಬುರಗಿ : ಜನವರಿ ಅಂತ್ಯದಿಂದ ಅಥವಾ ಮುಂದಿನ ತಿಂಗಳಿಂದ 5 ಕೆ.ಜಿ ಅಕ್ಕಿಯ ಬದಲಾಗಿ ತೊಗರಿ ಬೇಳೆ, ಸಕ್ಕರೆ, ಎಣ್ಣೆ ಮತ್ತು ಉಪ್ಪು ಒಳಗೊಂಡ ಪೌಷ್ಟಿಕ ಇಂದಿರಾ ಕಿಟ್ ವಿತರಣೆ ಆರಂಭವಾಗಲಿದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಜನವರಿ ಅಂತ್ಯದಿಂದ ಅಥವಾ ಮುಂದಿನ ತಿಂಗಳಿಂದ 5 ಕೆ.ಜಿ ಅಕ್ಕಿಯ ಬದಲಾಗಿ ತೊಗರಿ ಬೇಳೆ, ಸಕ್ಕರೆ, ಎಣ್ಣೆ ಮತ್ತು ಉಪ್ಪು ಒಳಗೊಂಡ ಪೌಷ್ಟಿಕ ಇಂದಿರಾ ಕಿಟ್ ವಿತರಣೆ ಆರಂಭವಾಗಲಿದೆ. 4.50 ಕೋಟಿ ಜನರಿಗೆ ಲಾಭ ಸಿಗಲಿದೆ ಎಂದು ಹೇಳಿದ್ದಾರೆ.
ಇಂದಿರಾ ಆಹಾರದ ಕಿಟ್ ನಲ್ಲಿ ಏನಿರಲಿದೆ?
ತೊಗರಿ ಬೇಳೆ – 1 ಕೆಜಿ
ಹೆಸರುಕಾಳು- 1 ಕೆಜಿ
ಅಡುಗೆ ಎಣ್ಣೆ – 1 ಲೀಟರ್
ಸಕ್ಕರೆ – 1 ಕೆಜಿ
ಉಪ್ಪು- 1 ಕೆಜಿ
ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಲು ಅಯವ್ಯಯದಲ್ಲಿ ಹಂಚಿಕೆ ಮಾಡಿರುವ ರೂ.6,426 ಕೋಟಿ ಅನುದಾನದಲ್ಲಿ ರೂ.6,119.52 ಕೋಟಿ ವೆಚ್ಚದಲ್ಲಿ ಇಂದಿರಾ ಆಹಾರ ಕಿಟ್ ಒದಗಿಸಲು ಬಜೆಟ್ ಮರು ಹಂಚಿಕೆ ಮಾಡಲು ನುಮೋದನೆ ನೀಡಿದೆ.








