ತುಮಕೂರು : ಇಂದಿನ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಸ್ವಲ್ಪ ಗದರಿದರೂ ಸಾಕು ಸಿಟ್ಟಿನಲ್ಲಿ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಾರೆ. ಇದೀಗ ಶಾಲೆಗೆ ತಪ್ಪದೆ ಹೋಗು ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಬಾವಿಗೆ ಹಾರಿ 8ನೇ ತರಗತಿ ವಿದ್ಯಾರ್ಥಿ ಜಗದೀಶ್ (14) ಆತ್ಮಹತ್ಯೆ ಶರಣಾಗಿರುವ ಬಾಲಕ ಎಂದು ತಿಳಿದು ಬಂದಿದೆ.ಶಾಲೆಗೆ ತಪ್ಪದೆ ಹೋಗು ಎಂದು ಬುದ್ದಿವಾದ ಹೇಳಿದ್ದಕ್ಕೆ ಇದರಿಂದ ಬಾಲಕ ಮನನೊಂದು, ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಚಿಕ್ಕನಾಯಕನಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








