ಬೆಂಗಳೂರು : ಪತ್ನಿಗೆ ಪೊಲೀಸ್ ಕಾನ್ಸ್ಟೇಬಲ್ ನಿಂದ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ ಚಿಟಗುಪ್ಪ ಮೂಲದ ಕಾನ್ಸ್ಟೇಬಲ್ ಮ ಕೇಂದ್ರ ವಿರುದ್ಧ ಈ ಒಂದು ಕಿರುಕುಳ ಆರೋಪ ಕೇಳಿ ಬಂದಿದೆ. ಬೀದರ ಜಿಲ್ಲೆಯ ಔರಾದ್ನಲ್ಲಿ ಮಚೇಂದ್ರ ಪತ್ನಿ ಸೀನಾ ಈ ಒಂದು ಆರೋಪ ಮಾಡಿದ್ದು ಬೆಂಗಳೂರಿನ ಮೈಕೋಲೇಔಟ್ ಟ್ರಾಫಿಕ್ ಠಾಣೆಯ ಪಿಸಿ ಆಗಿರುವ ಮಚೇಂದ್ರ ಮೃದ ಈ ಒಂದು ಆರೋಪ ಮಾಡಿದ್ದಾರೆ.
ಮಕ್ಕಳು ಆಗಿಲ್ಲ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಮಚೇಂದ್ರ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ಆರೋಪ ಕೇಳಿಬಂದಿದೆ. ಮಾನಸಿಕ ಹಿಂಸೆ ನೀಡಿ ಜೀವ ಬಿದರಿಕೆ ಹಾಕಿದ್ದಾರೆ ವರದಕ್ಷಿಣೆ ಕೊಡದಿದ್ದರೆ ಅಕ್ಕನ ಮಗಳನ್ನು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದಾರೆ ಈ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಔರಾದ್ ತಾಲೂಕಿನ ಚಿಂತಾಕಿ ಠಾಣೆಯಲ್ಲೂ ಕೂಡ ಎಫ್ಐಆರ್ ದಾಖಲಾಗಿತ್ತು.
ಆದರೂ ಕೂಡ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ ನಮಗೆ ರಕ್ಷಣೆ ನೀಡಿ ನ್ಯಾಯ ಕೊಡಿ ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ 2022 ಡಿಸೆಂಬರ್ 14ರಂದು ಮಚ್ಚೇಂದ್ರ ಮತ್ತು ಸೀನಾ ಮದುವೆ ಆಗಿತ್ತು ಆರಂಭದಲ್ಲಿ ದಂಪತಿ ಬೆಂಗಳೂರಿನಲ್ಲಿಯೇ ವಾಸವಿದ್ದರು. ನಂತರ ಹುಷಾರು ಇಲ್ಲ ಅಂತ ಪತ್ನಿಯನ್ನು ಪತಿ ತವರುಮನೆಗೆ ಬಿಟ್ಟಿದ್ದ. ಇದೀಗ ಪೊಲೀಸ್ ಕಾನ್ಸ್ಟೇಬಲ್ ಮಚ್ಚೆಂದ್ರ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ








