ಬೆಳಗಾವಿ : ಇತ್ತೀಚಿಗೆ ತಾನೇ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟದಿಂದ 7 ಜನ ಕಾರ್ಮಿಕರು ಸಾವನ್ನಪ್ಪಿದ್ದರು. ಇದೀಗ ಮತ್ತೊಂದು ದುರಂತ ಸಂಭವಿಸಿದ್ದು ಸಕ್ಕರೆ ಕಾರ್ಖಾನೆ, ಕೃಷಿ ಬೆಲ್ಟ್ ನಲ್ಲಿ ಸಿಲುಕಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಇರುವಂತಹ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ಅಮೀನಾಭಾವಿ ಗ್ರಾಮದ ಕಾರ್ಮಿಕ ಸಚಿನ್ ದ್ಯಾಮಣ್ಣಿ (36) ಸಾವನ್ನಪ್ಪಿದ್ದಾರೆ ಕ್ರಶರ್ ನಲ್ಲಿ ಸುಣ್ಣ ಹಾಕುವಾಗ ಆಯತಪ್ಪಿ ಬಿದ್ದು ಸಚಿನ್ ಸಾವನ್ನಪ್ಪಿದ್ದರೆ. 10 ದಿನಗಳ ಹಿಂದೆ ದಿನಗೂಲಿ ಆಧಾರದ ಮೇಲೆ ಸಚಿನ್ ಕೆಲಸಕ್ಕೆ ಸೇರಿದ್ದರು. ಈ ಗುರುತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








