ಬಳ್ಳಾರಿ : ಬಳ್ಳಾರಿಯಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಗಲಾಟೆ ನಡೆದು ಘರ್ಷಣೆಯ ವೇಳೆ ಫೈರಿಂಗ್ ಆಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನಪ್ಪಿದ್ದ. ಇದೀಗ ರಾಜ್ಯ ಸರ್ಕಾರ ಈ ಒಂದು ಪ್ರಕರಣವನ್ನು ಸಿಐಡಿ ಗೆ ಹಸ್ತಾಂತರಿಸಿದ್ದು ಸಿಐಡಿ ಅಧಿಕಾರಿಗಳು ಇದೀಗ ತನಿಖೆ ಚುರುಕುಗಳಿಸಿದ್ದಾರೆ. ವಿಡಿಯೋ ಫೋಟೋ ಆಧರಿಸಿ, 40 ಜನರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ
ಹೌದು ಬಳ್ಳಾರಿ ಗಲಭೆ ಪ್ರಕರಣದ ಸಿಐಡಿ ಅಧಿಕಾರಿಗಳ ತನಿಖೆ ಚುರುಕುಗೊಳಿಸಿದ್ದಾರೆ. ಇಡೀ ಘಟನೆಯ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ವಿಡಿಯೋ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸಿಐಡಿ ಎಸ್ ಪಿ ಡಾ. ಹರ್ಷ ಪ್ರಿಯಂವದ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಲಾಗಿದೆ. ಪೊಲೀಸರಿಂದ ನಾಲ್ಕು ಪ್ರಕರಣಗಳ ಫೈಲ್ಗಳನ್ನು ಸಿಐಡಿ ಅಧಿಕಾರಿಗಳು ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಗಲಾಟೆ ಸಂದರ್ಭದಲ್ಲಿ ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಈಗಾಗಲೇ ಸಿಐಡಿ ಅಧಿಕಾರಿಗಳು ಸುಮಾರು 40ಕ್ಕೂ ಹೆಚ್ಚು ಜನರ ರಿಲೀಸ್ ಮಾಡಿದ್ದಾರೆ. ಕಟ್ಟಿಗೆ ಕಲ್ಲುಗಳು ಬಂದೂಕು ಹಿಡಿದ ವ್ಯಕ್ತಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ ವಿಚಾರಣೆಗೆ ಕರೆಯಲು ಸಿಐಡಿ ತಯಾರಿ ಮಾಡಿಕೊಂಡಿದೆ ಎನ್ನಲಾಗಿದೆ.








