ಕಾಶ್ಮೀರ : ಗಡಿಯಲ್ಲಿ ಮತ್ತೆ ಪಾಪಿ ಪಾಕಿಸ್ತಾನ್ ಬಾಲ ಬಿಚ್ಚಿದೆ. ಜಮ್ಮು ಕಾಶ್ಮೀರದತ್ತ ಪಾಕಿಸ್ತಾನ ಡ್ರೋನ್ ಗಳು ನುಗ್ಗಿ ಬಂದಿವೆ. ಪಾಕಿಸ್ತಾನ ಕಿತಾಪತಿಗೆ ಭಾರತೀಯ ಸೇನೆ ತಿರುಗಟು ನೀಡಿದೆ. ಪಾಕಿಸ್ತಾನದ ಡ್ರೋನ್ ಗಳನ್ನು ಭಾರತೀಯ ಸೇನೆ ದ್ವಂಸ ಮಾಡಿದೆ.
ಹೌದು ಅನುಮಾನಾಸ್ಪದವಾಗಿ ಪಾಕಿಸ್ತಾನ್ ಡ್ರೋನ್ ಗಳು ಹಾರಿ ಬಂದಿದ್ದವು. ನಿನ್ನೆ ಸಂಜೆ 6:35 ರ ಸುಮಾರಿಗೆ ಪಾಕಿಸ್ತಾನ ಡ್ರೋನ್ ಗಳ ಹಾರಾಟ ನಡೆದಿತ್ತು. ಗನಿಯ ಕಲ್ಸಿಯನ್ ಗ್ರಾಮಗಳ ಪ್ರದೇಶದ ಮೇಲೆ ಹಾರಾಟ ನಡೆಸಲಾಗಿತ್ತು. ಮಧ್ಯಮ ಮತ್ತು ಹಗುರವಾದ ಮಷೀನ್ ಗಳಿಂದ ಡ್ರೋನ್ ಗಳನ್ನು ಉಡೀಸ್ ಮಾಡಲಾಗಿದೆ. ಅಂತರಾಷ್ಟ್ರೀಯ ಅಂಗಡಿಯಲ್ಲಿ ಭಾರತೀಯ ಸೇನೆ ಹೈ ಅಲರ್ಟ್ ಆಗಿದೆ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಲು ಮುಂದಾಗಿದ್ದು ಅದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ.








