ಬಳ್ಳಾರಿ : ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಪ್ರಕರಣ ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಶಾಸಕ ಜನಾರ್ಧನ ರೆಡ್ಡಿ ಜನವರಿ 17ರಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ. ಜನವರಿ 17 ರಂದು ಬೃಹತ್ ಹೋರಾಟ ಮಾಡುತ್ತೇವೆ. ಪ್ರತಿಭಟನೆಗೆ ಜಿಲ್ಲಾಧಿಕಾರಿ ಅನುಮತಿ ಕೋರಿ ಮನವಿ ಮಾಡಿದ್ದೇವೆ. ಪ್ರತಿಭಟನೆಗೆ ಅನುಮತಿ ಕೊಡದಿದ್ದರೆ ಕೋರ್ಟಿಗೆ ಹೋಗುತ್ತೇವೆ ಎಂದು ಅವರು ತಿಳಿಸಿದರು.
ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆನಾ ಅಥವಾ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆನಾ ಎನ್ನುವುದರ ಬಗ್ಗೆ ನಾಳೆ ಘೋಷಣೆ ಮಾಡುತ್ತೇವೆ. ಹೋರಾಟದ ರೂಪರೇಷೆಯ ಬಗ್ಗೆ ಪಕ್ಷದ ಹಿರಿಯರು ಘೋಷಿಸುತ್ತಾರೆ. ಪಕ್ಷದ ಹಿರಿಯರ ಜೊತೆಗೆ ನಿನ್ನೆ ಈ ವಿಚಾರವಾಗಿ ಚರ್ಚೆಯಾಗಿದೆ. ಗಲಭೆಕೋರರ ಬಂಧನ ಆಗುವವರಿಗೆ ಹೋರಾಟ ಮಾಡಿ ಅಂತ ಜನರು ಹೇಳುತ್ತಿದ್ದಾರೆ. ರಾಜ್ಯಾದ್ಯಂತ ಈ ಹೋರಾಟ ನಡೆಯಲಿದೆ ಎಂದು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಹೇಳಿಕೆ ನೀಡಿದರು.








