ಮೈಸೂರು : ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಒದ್ದು ಕಿತ್ತುಕೊಳ್ಳುತ್ತೇನೆ ಅಂತ ಹೇಳಿದ್ದಾರೆ. ಹಾಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಖಂಡಿತವಾಗಿಯೂ ಸಿಎಂ ಸ್ಥಾನವನ್ನು ಒದ್ದು ಕಿತ್ತುಕೊಳ್ಳುತ್ತಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದರು.
ಮೈಸೂರಲ್ಲಿ ಮಾತನಾಡಿದ ಅವರು ಡಿಸಿಎಂ ಡಿಕೆ ಶಿವಕುಮಾರ್ ಖಂಡಿತವಾಗಿಯೂ ಮುಖ್ಯಮಂತ್ರಿ ಕುರ್ಚಿಯನ್ನು ಒದ್ದು ಕಿತ್ತುಕೊಳ್ಳುತ್ತಾರೆ. ಡಿಕೆ ಶಿವಕುಮಾರ್ ಕ್ಯಾರೆಕ್ಟರ್ ಅದೇ ರೀತಿ ಇದೆ. ಡಿಕೆ ಶಿವಕುಮಾರ್ ಇದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ಖಂಡಿತ ಕ್ರಾಂತಿ ಆಗಿದೆ. ಅದೇ ಕಾರಣಕ್ಕೆ ಸಿದ್ದರಾಮಯ್ಯ ಪ್ರತಿದಿನ ನಾನೇ ಸಿಎಂ ಅಂತಿದ್ದಾರೆ. ಹೈಕಮಾಂಡ್ ಹೇಳಿದರೆ ಸಿಎಂ ಸ್ಥಾನ ಬಿಟ್ಟು ಕೊಡುತ್ತೇನೆ ಅಂತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಹೆಣ ಹೊರುವವರಿಗೆ ಹಿಂದೆ ಆದರೆ ಏನು ಮುಂದೆ ಆದರೆ ಏನು ಆ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಆಗಿದೆ ಡಿಕೆ ಶಿವಕುಮಾರ್ ನಮ್ಮ ಕಡೆ ಬಂದರೆ ಸೇರಿಸಿಕೊಳ್ಳುವುದಿಲ್ಲ ಡಿಕೆ ಶಿವಕುಮಾರ್ ಗೆ ನಮ್ಮ ಪಾರ್ಟಿಗೆ ನೋ ಎಂಟ್ರಿ ಅಂತ ಆರ್ ಅಶೋಕ್ ಖಡಕ್ ಆಗಿ ಹೇಳಿದರು.








