ಬೆಂಗಳೂರು; ನಗರದಲ್ಲಿ ತಾಯಿ ಮೇಲಿನ ಸಿಟ್ಟಿಗೆ 6 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವಂತ ಆಘಾತಕಾರಿ ಘಟನೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ತಾಯಿಯ ಮೇಲಿನ ಸಿಟ್ಟಿಗೆ ಆಕೆಯ 6 ವರ್ಷದ ಬಾಲಕಿಯನ್ನು ಚಾಕೋಲೇಟ್ ಕೊಡಿಸ್ತೀನಿ ಎಂಬುದಾಗಿ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಮೋರಿಗೆ ಎಸೆದಿದ್ದು ಆರೋಪಿ ಯೂಸೂಫ್ ಪರಾರಿಯಾಗಿದ್ದನು.
ಆರೋಪಿ ಯೂಸೂಫ್ ಹತ್ಯೆ ಬಳಿಕ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದನು. ಆತನನ್ನು ಬಂಧಿಸಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಂತ ಸಂದರ್ಭದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಬಳಿಕ ಹತ್ಯೆಗೈದು ಶವವನ್ನು ಮೋರಿಗೆ ಎಸೆದಿದ್ದಾಗಿ ಬಾಯಿ ಬಿಟ್ಟಿದ್ದಾನೆ.
ಇನ್ನೂ ತಾಯಿ ಜೊತೆಗಿನ ಜಗಳಕ್ಕೆ ಮಗಳನ್ನು ಕೊಲೆ ಮಾಡಿರೋದಾಗಿ ಹೇಳಲಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಅತ್ಯಾಚಾರ ನಡೆಸಿರುವುದಾಗಿ ತಿಳಿದು ಬಂದಿದೆ. ವಿಚಾರಣೆ ವೇಳೆಯಲ್ಲಿ ಅತ್ಯಾಚಾರ ಮಾಡೋದಕ್ಕೆ ಚಾಕೋಲೇಟ್ ಕೊಡಿಸೋದಾಗಿ ಕರೆದೊಯ್ಯಿದ್ದೆ. ಆ ಬಳಿಕ ಹತ್ಯೆ ಮಾಡೋದಾಗಿ ಪೊಲೀಸರಿಗೆ ಆರೋಪಿ ಯೂಸೂಫ್ ತಿಳಿಸಿದ್ದಾನೆ ಎನ್ನಲಾಗಿದೆ. ಈ ವೈಟ್ ಫೀಲ್ಡ್ ಠಾಣೆಯ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ‘ರೇಷನ್ ಕಾರ್ಡ್’ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೆ ಅವಕಾಶ.!
ಈಗ ಗ್ರಾಮ ಪಂಚಾಯ್ತಿಯಲ್ಲೇ ದೊರೆಯಲಿದೆ ’11ಇ ನಕ್ಷೆ’ ಸೇರಿದಂತೆ ಈ ಭೂ ದಾಖಲೆಗಳು: ಇಷ್ಟು ಶುಲ್ಕ ನಿಗದಿ






