ಬೆಂಗಳೂರು : ನನ್ನ ಬಂಡೆ ಬಂಡೆ ಅಂತ ಕರೀತಾರೆ.ಬಂಡೆ ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ ಟೀಕೆ ಸಾಯುತ್ತದೆ ಕೆಲಸ ಉಳಿಯುತ್ತದೆ ಎಂದು ಬೆಂಗಳೂರಿನ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಬೆಂಗಳೂರಿನಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ಪೋ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಷಾರಾಗಿರಿ ನೀವು ವ್ಯವಹಾರ ಮಾಡುವಾಗ ಯಶಸ್ಸು ಮುಖ್ಯ. ನನ್ನನ್ನು ಬಂಡೆ ಅಂತ ಕರೆಯುತ್ತಾರೆ ಆದರೆ ಬಂಡೆ ಮುಂದೆ ಆಕೃತಿ ಆಗುತ್ತದೆ. ನಾನು ಚಿಕ್ಕವನು ಆಗಿರಬಹುದು ಆದರೆ ಅನುಭವ ಇದೆ ನನ್ನ ಜಾತಿ ಅವರೇ ನನ್ನನ್ನು ಟೀಕೆ ಮಾಡುತ್ತಿದ್ದಾರೆ ಹಿಂದೆ ಮುಂದೆಯಿಂದ ಚಾಕು ಹಾಕುತ್ತಿದ್ದಾರೆ ಎಚ್ ಡಿ ಕುಮಾರಸ್ವಾಮಿ ಜೊತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಆದರೆ ಅವರೇ ನನಗೆ ಚಾಕು ಹಾಕಿದ್ದಾರೆ ಅಂತ ಹೇಳಿದ್ದಾರೆ ಸಕ್ಸಸ್ ಸ್ಟೋರಿಯಲ್ಲಿ ಶ್ರಮ ಮತ್ತು ಟೀಕೆ ಇದ್ದೇ ಇರುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಬಂಡೆ ಪ್ರಕೃತಿ ಕಡೆದರೆ ಆಕೃತಿ ಪೂಜಿಸಿದರೆ ಸಂಸ್ಕೃತಿ ನಾನು ಶ್ರಮ ಪಟ್ಟಿದ್ದಕ್ಕೆ ಇಲ್ಲಿಯವರೆಗೆ ಬಂದು ಕುಳಿತಿದ್ದೇನೆ. ಹೊಡೆದು ಬಡೆದು ಏಟು ತಿಂದು ಇಲ್ಲಿಯವರೆಗೂ ನಾನು ಬಂದಿದ್ದೇನೆ. ಪಕ್ಷದವರು ಮುಂದೆ ಏನು ಮಾಡುತ್ತಾರೆ ಅಂತ ಆತ್ಮವಿಶ್ವಾಸ ಇದೆ. ನೀವ್ಯಾರು ತಲೆಕೆಡಿಸಿಕೊಳ್ಳೋಕೆ ಹೋಗಬೇಡಿ. ನನಗೋಸ್ಕರ ಹರಕೆ ಮಾಡಿಕೊಂಡಿದ್ದೀರಿ ಮಾಡಿಕೊಳ್ಳುತ್ತಿದ್ದೀರಿ ಆದರೆ ಪ್ರಯತ್ನವಿಫಲ ಆದರೂ ಪ್ರಾರ್ಥನೆ ವಿಫಲ ಆಗಲ್ಲ ಎಂದು ತಿಳಿಸಿದರು.








