ಬೆಂಗಳೂರು : ಆಧುನಿಕ ಜಗತ್ತಿನಲ್ಲಿ ಅದರಲ್ಲೂ ಯುವತಿಯರು ಶಾರ್ಟ್ ಬಟ್ಟೆ ಧರಿಸಿ ಫ್ಯಾಷನ್ ಮಾಡುವುದು ಸಹಜ. ಆದರೆ ಬೆಂಗಳೂರಿನಲ್ಲಿ ಯುವತಿ ಅಮಾನವೀಯವಾಗಿ ವರ್ತನೆ ತೋರಿದ್ದು, ಬಟ್ಟೆ ವಿಚಾರಕ್ಕೆ ಬುದ್ದಿ ಹೇಳಿದ ಹೋಂ ಗಾರ್ಡ್ ನನ್ನೇ ಯುವತಿ ಥಳಿಸಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು ಮೋಹಿನಿ ಎಂಬ ಯುವತಿ ಮಹಿಳಾ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾಳೆ. ಲಕ್ಷ್ಮೀನರಸಮ್ಮ ಹಲ್ಲೆಗೊಳಗಾದ ಹೋಂ ಗಾರ್ಡ್ ಎಂದು ತಿಳಿದುಬಂದಿದ್ದು ಬೆಂಗಳೂರಿನ ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಯುವತಿ ಮೋಹಿನಿ ಶಾರ್ಟ್ ಬಟ್ಟೆಗಳನ್ನು ಧರಿಸಿ ಓಡಾಡುತ್ತಿದ್ದಳು. ಯುವತಿಯನ್ನು ನೋಡಿ ಕೆಲ ಯುವಕರು ಚುಡಾಯಿಸುತ್ತಿದ್ದರು. ರಸ್ತೆಯಲ್ಲಿ ಪುಂಡರು ಪೀಡಿಸುತ್ತಿರುವುದನ್ನು ಕಂಡು ಹೋಂಗಾರ್ಡ್ ಲಕ್ಷ್ಮೀನರಸಮ್ಮ ಯುವಿಗೆ ಕರೆದು ವಿಚಾರಿಸಿದ್ದಾರೆ. ಶಾರ್ಟ್ ಬಟ್ಟೆಗಳನ್ನು ಧರಿಸಿ ಹೀಗೆ ಓಡಾಡಬೇಡ. ಸರಿಯಾಗಿ ಬಟ್ಟೆ ಹಾಕಿಕೊಳ್ಳುವಂತೆ ಬುದ್ಧಿ ಹೇಳಿದ್ದಾರೆ.
ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಯುವತಿ ಹೋಂ ಗಾರ್ಡ್ ಗೆ ಮನಬಂದಂತೆ ಹೊಡೆದು ಹಲ್ಲೆ ನಡೆಸಿದ್ದಾಳೆ. ಅಷ್ಟೆ ಅಲ್ಲದೇ ನಡು ರಸ್ತೆಯಲ್ಲೇ ಲಕ್ಷ್ಮೀ ಅವರ ಜುಟ್ಟು ಹಿಡಿದು ಎಳೆದಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ನಡೆಸಿರುವ ಯುವತಿ ಮೋಹಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.








