ಬೆಂಗಳೂರು : ಬೆಂಗಳೂರಿನಲ್ಲಿ ಡೆಂಟಲ್ ವಿದ್ಯಾರ್ಥಿನಿ ಒಬ್ಬಳು ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ತಳಲಾರದೆ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಬೊಮ್ಮನಹಳ್ಳಿಯ ಯಶಸ್ವಿನಿ (19) ಎನ್ನುವ ವಿದ್ಯಾರ್ಥಿನಿ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಳು. ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹೌದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯಶಸ್ವಿನಿ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿದೆ. ಆತ್ಮಹತ್ಯೆಗೆ ಮುನ್ನ ಯಶಸ್ವಿನಿ ಕಣ್ಣೀರು ಹಾಕಿದ್ದಾಳೆ. ಪರೀಕ್ಷೆಯ ವೇಳೆ ಓಎಂಆರ್ ಶೀಟ್ ಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ. ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದ್ದು ಉಪನ್ಯಾಸಕ ಮತ್ತು ಕಾಲೇಜು ಆಡಳಿತ ಮಂಡಳಿ ಕಿರುಕುಳ ನೀಡಿದ್ದಾರೆ. ಬೊಮ್ಮನಹಳ್ಳಿಯ ಆಕ್ಸ್ಫರ್ಡ್ ಕಾಲೇಜಿನಲ್ಲಿ ಯಶಸ್ವಿನಿ ಡೆಂಟಲ್ ಮೂರನೇ ವರ್ಷದಲ್ಲಿ ಓದುತ್ತಿದಳು.
ಇನ್ನು ಆತ್ಮಹತ್ಯೆಗೂ ಮುನ್ನ ಯಶಸ್ವಿನಿ ಡೆತ್ ನೋಟ್ ಬರೆದಿಟ್ಟು ಸಾವನಪ್ಪಿದ್ದಾಳೆ. ಡೆತ್ ನೋಟ್ನಲ್ಲಿ ನನ್ನ ಸಾವಿಗೆ ಯಾರು ಕಾರಣ ಅಲ್ಲ ನಾನು ಬದುಕೋಕೆ ಯೋಗ್ಯಲಲ್ಲ ನನ್ನನ್ನು ಕ್ಷಮಿಸಿಬಿಡಿ ನಾನು ಒಳ್ಳೆಯ ಮಗಳಲ್ಲ ಸಾರಿ ಅಮ್ಮ ಅಂತ ಯಶಸ್ವಿನಿ ಡೆತ್ ನಲ್ಲಿ ಉಲ್ಲೇಖಿಸಿರುವುದು ಇದೀಗ ತಿಳಿದು ಬಂದಿದೆ.








