ಬೆಂಗಳೂರು : ಕೆಜಿಎಫ್ ಸಿನಿಮಾ ಬಳಿಕ ನಟ ಯಶ್ ಅವರು ‘ಟ್ಯಾಕ್ಸಿಕ್’ ಅವರು ಕಾಣಿಸಿಕೊಳ್ಳುತ್ತಿದ್ದು ಅವರ ಈ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡದ ಸಿನಿಮಾಗಳು ಯಾವ ಚಿತ್ರರಂಗಗಳಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ಪ್ರೂವ್ ಮಾಡುವುದಕ್ಕೆ ನಟ ಯಶ್ ಈ ಸಿನಿಮಾದ ಮೂಲಕ ನಿರೂಪಿಸಲು ಮುಂದಾಗಿರುವುದು ಕನ್ನಡರಿಗೆ ಹೆಮ್ಮೆ ಕೂಡ.
ಇದೀಗ ಟಾಕ್ಸಿಕ್ ಸಿನಿಮಾ ಟೀಸರ್ ಮಾದರಿಯಲ್ಲಿಯೇ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಮ್ ನಲ್ಲಿ AI ಮೂಲಕ ವಿಡಿಯೋ ಒಂದನ್ನು ಎಡಿಟ್ ಮಾಡಿ ಹರಿ ಬಿಟ್ಟಿದ್ದು, ಭಾರಿ ವೈರಲ್ ಆಗಿದೆ. ಆದರೆ ಇಲ್ಲಿ ಡೈಲಾಗ್ ಗಳು ಬೇರೆ ಇದ್ದು, ರಾಜರಾಜಕಾರಣಕ್ಕೆ ಸಂಬಂಧಪಟ್ಟಂತೆ ಇವೆ.
maddur-haiklu ಎಂಬ ಪೇಜ್ ನಲ್ಲಿ ವಿಡಿಯೋದಲ್ಲಿ ನಾವು ಈ ರಾಜ್ಯವನ್ನು ಶಾಂತಿಯುತವಾಗಿ ಲೂಟಿ ಮಾಡಲು ಬಯಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರೆ, ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯಕ್ಕೆ ಮರಳುತ್ತಾರೆಂದು ನಿಮಗೆ ಅನಿಸುತ್ತಾ? ಅಂತ ಕೇಳ್ತಾರೆ ಆಗ ಡಿಕೆ ಶಿವಕುಮಾರ್ ನನಗನ್ನಿಸುವುದಿಲ್ಲ ಸರ್ ಎಂದಾಗ ಕಾರಿನಲ್ಲಿ HD ಕುಮಾರಸ್ವಾಮಿ ರಾಯಲ್ ಎಂಟ್ರಿ ಕೊಡ್ತಾರೆ. ಅವನು ಇಲ್ಲಿಗೆ ಬರುತ್ತಾನೆ ಎಂದು ನಿರೀಕ್ಷಿಸಿರ ಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ಆಗ ಕೊನೆಯದಾಗಿ ಹೆಚ್ ಡಿ ಕುಮಾರಸ್ವಾಮಿ ಡ್ಯಾಡಿ ಇಸ್ ಹೋಂ ಅಂತ ಡೈಲಾಗ್ ಹೇಳುತ್ತಾರೆ. ಇದೀಗ ಈ ಒಂದು ವಿಡಿಯೋ ಭಾರಿ ವೈರಲ್ ಆಗಿದೆ.








