ಬೆಂಗಳೂರು : ಬೆಂಗಳೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ರಸ್ತೆಯ ಬದಿ ನಿಂತಿದ್ದ ಆರು ಜನ ಪವಾಡ ಸದೃಶದಲ್ಲಿ ಪಾರಾಗಿದ್ದಾರೆ. ಇಂದಿರಾನಗರದಲ್ಲಿ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೇಗವಾಗಿ ದಿವೈಡರ್ ಹಾರಿ ಕಾರು ರಸ್ತೆಗೆ ನುಗ್ಗಿದೆ. ಸಿನಿಮಾ ಸ್ಟಂಟ್ ಮಾದರಿಯಲ್ಲಿ ಕಾರು ಹಾರಿದೆ. ಬೈಕ್ ಸವಾರರು ಪಾದ ಜಾರಿಗಳು ಜಸ್ಟ್ ಮಿಸ್ ಆಗಿದ್ದಾರೆ. ಇಂದಿರಾ ನಗರದ 18ನೇ ಮುಖ್ಯರಸ್ತೆಯಲ್ಲಿ ಆಗಿರುವಂತಹ ಘಟನೆ ಇದು. ಈ ವೇಳೆ ಆರು ಜನ ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರು ಸಹ ಸಾಕಷ್ಟು ನೋವು ಪ್ರಾಣಹಾನಿ ಆಗುವ ಸಂಭವವಿತ್ತು.
ಕಾರು ಚಾಲಕ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಾನೆ. ರಸ್ತೆ ಬದಿಯ ಡಿವೈಡರಿಗೆ ಕಾರು ಡಿಕ್ಕಿ ಆದ ಶಬ್ದ ಕೇಳಿ ರಸ್ತೆ ಬದಿಯಲ್ಲಿ ನಿಂತವರು ಅಲರ್ಟ್ ಆಗಿದ್ದಾರೆ. ಕೂಡಲೇ ಆರು ಜನ ಪಾದಚಾರಿಗಳು ಯುವಕರು ಹಾಗೂ ಇಬ್ಬರು ಯುವತಿಯರು ಬಚಾವ್ ಆಗಿದ್ದಾರೆ. ಅಲ್ಲದೆ ಇಬ್ಬರು ಬೈಕ್ ಸವಾರರು ಕೂಡ ಗ್ರೇಟ್ ಎಸ್ಕೇಪ್ ಆಗಿದ್ದಾರೆ, ಜೀವನ್ ಭೀಮಾ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








