ಮೈಸೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಳಲೆ ಎಂಬ ಗ್ರಾಮದಲ್ಲಿ ನಡೆದಿದೆ. ರಿಪೀಸ್ ಪಟ್ಟಿಯಿಂದ ಹೊಡೆದು ಸುಧಾ (30) ರನ್ನು ಪತಿ ಮಹೇಶ್ ಕೊಲೆ ಮಾಡಿದ್ದಾನೆ.
13 ವರ್ಷದ ಹಿಂದೆ ಮಲ್ಲಹಳ್ಳಿ ಮಹೇಶ ಸುಧಾ ಅವರನ್ನು ವಿವಾಹವಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಸುಧಾ ಮತ್ತು ಮಹೇಶ್ ದೂರವಾಗಿದ್ದರು. ಕಳಲೇ ಗ್ರಾಮದ ದೊಡ್ಡಬೀದಿಯಲ್ಲಿ ಮಹೇಶ್ ಪತ್ನಿ ಸುಧಾ ವಾಸವಿದ್ದರು. ನಿನ್ನೆ ರಾತ್ರಿ ಹೆಂಡತಿ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಂದು ಪತಿ ಮಹೇಶ್ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








