ಬೆಂಗಳೂರು : ಹೈಕೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಐವರಿಂದ 54 ಲಕ್ಷ ಪಡೆದು ವಂಚಿಸಿರುವ ಘಟನೆ ಇದು ಈಗ ಬೆಳಕಿಗೆ ಬಂದಿದೆ 2013 ರಲ್ಲಿ ಹೈಕೋರ್ಟ್ ಅಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ವೇಳೆ ಕಾಯಂ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಎಸಗಲಾಗಿದೆ.
ಸುಮಿತ್, ಶಿವಕುಮಾರ್, ಮಹಿಮಾ, ಹರ್ಷ ಮತ್ತು ಹರ್ಷಿತಾಗೆ ಮೋಸ ಎಸಗಲಾಗಿದೆ. ಸುದರ್ಶನ್, ಲವೀನಾ ಜೆನೆಟ್, ಮಹೇಂದ್ರ, ಜೈಸನ್ ಡಿಸೋಜಾ ಸೇರಿದಂತೆ ಏಳು ಜನರ ವಿರುದ್ಧ ಇದೀಗ ದೂರು ದಾಖಲಾಗಿದೆ. ಹೈಕೋರ್ಟ್ ರಿಜಿಸ್ಟರ್ ಜನರಲ್ ದಾಖಲೆ ನಕಲು ಮಾಡಿ ಮೋಸ ಮಾಡಿದ್ದಾರೆ.
ಎಫ್ ಡಿ ಎ ಎಸ್ ಡಿ ಎ ಹಾಗೂ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರು. ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಹೈಕೋರ್ಟಿನ ಕೆಲವು ದಾಖಲೆಗಳನ್ನೇ ಆರೋಪಿಗಳು ತಿರುಚಿದ್ದಾರೆ. ಕೊಟ್ಟ ಹಣಕ್ಕೆ ಕೆಲಸವು ಸಿಗದೆ ಹಣವು ವಾಪಸ್ ಆಗದೆ ಹಣ ಕೊಟ್ಟವರು ಪರದಾಡಿದ್ದಾರೆ. ವಂಚನೆ ಸಂಬಂಧ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.








