ಬೆಂಗಳೂರು : ಮಾಜಿ ಸಚಿವ ಎಚ್ ಎಮ್ ರೇವಣ್ಣ ಪುತ್ರನ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತನ ಕುಟುಂಬಕ್ಕೆ ಪರಿಹಾರ ನೀಡದೆ ಹೆಚ್ಎಮ್ ರೇವಣ್ಣ ಅವಮಾನಿಸಿದ್ದಾರೆ ಹೆಚ್ ಎಮ್ ರೇವಣ್ಣ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿದ್ದು ಅವರ ಪುತ್ರನ ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದ. ಡಿಸೆಂಬರ್ 11ರಂದು ಗುಡೇಮಾರನಹಳ್ಳಿ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸಿತ್ತು.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಗುಡೆಮಾರನಹಳ್ಳಿಯಲ್ಲಿ ಅಪಘಾತ ಸಂಭವಿಸಿದ್ದು ಎಚ್ ಎಮ್ ರೇವಣ್ಣ ಪುತ್ರ ಆರ್ ಶಶಾಂಕ್ ಬೈಕಿಗೆ ಡಿಕ್ಕಿ ಹೊಡೆದಿತ್ತು. ಸವಾರ ರಾಜೇಶ್ (23) ಬಲಿಯಾಗಿದ್ದ. ಮೃತ ರಾಜೇಶ್ ಮಾಗಡಿ ತಾಲೂಕಿನ ಬೆಳಗುಂಬಿ ಗ್ರಾಮದ ನಿವಾಸಿಯಾಗಿದ್ದು, ಪರಿಹಾರ ನೀಡುವುದಾಗಿ ಮನೆಗೆ ಕರೆಸಿಕೊಂಡು ಅವಮಾನಿಸಿದ್ದಾರೆ ಎಂದು ಹೆಚ್ಎಂ ರೇವಣ್ಣ ವಿರುದ್ಧ ಮೃತ ರಾಜೇಶ್ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮಗೆ ಸಾಲ ಇದ್ದರೆ ನಾನೇನು ಮಾಡಲಿ ಬೇರೆಯವರು ಅಪಘಾತ ಮಾಡಿದರೆ ಇದೇ ರೀತಿ ಪರಿಹಾರ ಕೇಳುತಿದ್ರ?? 2 ಲಕ್ಷ ಅಷ್ಟೇ ಕೊಡುತ್ತೇನೆ ಬೇಕಾದರೆ ತಗೊಳ್ಳಿ ಇಲ್ಲವಾದರೆ ಎದ್ದು ಹೋಗಿ. ಆದರೆ ಮಾಧ್ಯಮಗಳ ಮುಂದೆ ಯಾಕೆ ಹೋದರಿ? ಕೋರ್ಟ್ ನಲ್ಲಿ ಹೋಗಿ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ರಾಜೇಶ ಅಕ್ಕ ನಂದಿನಿ, ತಂದೆ ಗುಡ್ಡೆಗೌಡ ಹಾಗು ತಾಯಿ ರತ್ನ HM ರೇವಣ್ಣ ವಿರುದ್ಧ ಈ ಕುರಿತು ಆರೋಪಿಸಿದ್ದಾರೆ. ಪುತ್ರ ರಾಜೇಶ್ನನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.








