ಬೆಂಗಳೂರು : ಬೆಂಗಳೂರಿನ ಶ್ರೀನಿವಾಸಪುರದ ಬಳಿ ಇರುವ ಕೋಗಿಲು ಲೇಔಟ್ ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೋಗಿಲು ನಿರಾಶ್ರಿತರಿಗೆ ಒಟ್ಟು 26 ಜನರಿಗೆ ಮನೆ ಹಂಚಿಕೆ ಮಾಡಲಾಗುತ್ತದೆ. ಈಗಾಗಲೇ 26 ಜನರ ಡಾಕ್ಯುಮೆಂಟ್ಸ್ ವೆರಿಫಿಕೇಶನ್ ಆಗಿದ್ದು ಅವರಿಗೆ ಇಂದು ಮನೆ ಹಂಚಿಕೆ ಮಾಡಬಹುದು ಎಂದು ವಸತಿ ಇಲಾಖೆ ಸಚಿವ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಸಚಿವ ಜಮೀರ್ ಅಹ್ಮದ್ ಮಾಧ್ಯಮಗಳೊಂದಿಗೆ ಮಾತನಾಡಿ ಕೋಗಿಲು ನಿರಾಶ್ರಿತರಿಗೆ ಇಂದು ಹೊಸ ಮನೆ ಭಾಗ್ಯ ಒದಗಿಸಲಾಗುತ್ತದೆ. 26 ಜನರಿಗೆ ಮನೆ ಕೊಡಬಹುದು ಈ ಕುರಿತಂತೆ ಡಾಕ್ಯುಮೆಂಟ್ ವೆರಿಫಿಕೇಶನ್ ಆಗುತ್ತಿದೆ. ಕಂಡಿಷನ್ ಹಾಕಿ ಮನೆ ಕೊಡುತ್ತೇವೆ ಅಲ್ಲಿಯವರೆಗೂ ಯಾವ ಕಾರಣಕ್ಕೂ ಮನೆ ಕೊಡಲ್ಲ. ಸ್ಥಳೀಯರು ಆಗಿರಬೇಕು ಅಂತವರಿಗೆ ಮಾತ್ರ ಮನೆ ಕೊಡುತ್ತೇವೆ. ಕ್ಯಾಬಿನೆಟ್ ನಲ್ಲಿ ಯಾವುದೇ ಚರ್ಚೆ ಮಾಡಿಲ್ಲ.
26 ಜನರ ಡಾಕ್ಯುಮೆಂಟ್ ಕ್ಲಿಯರ್ ಆಗಿದೆ ಅವರಿಗೆ ಇವತ್ತು ಮನೆ ಕೊಡಬಹುದು. ಎಲ್ಲಾ ನಿರಾಶ್ರಿತರ ಡಾಕ್ಯುಮೆಂಟ್ ವೆರಿಫಿಕೇಶನ್ ನಡೆಯುತ್ತಿದೆ ಒಟ್ಟು 261 ಮನೆಯಲ್ಲಿ 161 ಮನೆಗಳು ಡೆಮಾಲಿಶ್ ಆಗಿದೆ ಅಪ್ಲಿಕೇಶನ್ ಕೂಡ ಜಾಸ್ತಿ ಬಂದಿದೆ ಅಪ್ಲಿಕೇಶನ್ ಹಾಕಿದ ಎಲ್ಲರಿಗೂ ಮನೆ ಕೊಡಕಾಗಲ್ಲ ಯಾವ ಮನೆ ಕೊಡಬೇಕು ಅಂತ ತೀರ್ಮಾನಿಸಲಾಗಿದೆ ಮುಖ್ಯಮಂತ್ರಿಗಳು ಕಂಡೀಶನ್ ಹಾಕಿ ಮನೆ ಕೊಡಲಾಗುತ್ತದೆ ನಮ್ಮ ಕರ್ನಾಟಕದವರು ಇರ್ಬೇಕು, ಲೋಕಲ್ ಆಗಿರಬೇಕು ಅಂತ ಕಂಡೀಶನ್ ಹಾಕಲಾಗಿದೆ ಎಂದು ತಿಳಿಸಿದರು.








