Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್‌ಗೆ ಟ್ರಂಪ್ 48 ಗಂಟೆಗಳ ಅಂತಿಮ ಎಚ್ಚರಿಕೆ: ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯ ಮುನ್ಸೂಚನೆ

22/03/2026 7:22 AM

ತೈಲ ಬೆಲೆ ಏರಿಕೆಗೆ ಬ್ರೇಕ್: ಸಮುದ್ರದಲ್ಲಿರುವ ಇರಾನ್ ತೈಲ ಮಾರಾಟಕ್ಕೆ ಅಮೆರಿಕದಿಂದ 30 ದಿನಗಳ ಕಾಲ ವಿನಾಯಿತಿ

22/03/2026 7:06 AM

ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್: ವಿಮಾನಯಾನ ದರಗಳ ಮೇಲಿದ್ದ ಮಿತಿ ತೆರವುಗೊಳಿಸಿದ ಕೇಂದ್ರ ಸರ್ಕಾರ

22/03/2026 6:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿನ್ನದ ಪದಕ ಪಡೆದ ‘KSRTC ಸಿಬ್ಬಂದಿ’ ಮಕ್ಕಳು: ನಗದು ಬಹುಮಾನ ನೀಡಿ ಸನ್ಮಾನಿಸಿ ಪ್ರೋತ್ಸಾಹಿಸಿದ ಸಚಿವ ರಾಮಲಿಂಗಾರೆಡ್ಡಿ
KARNATAKA

ಚಿನ್ನದ ಪದಕ ಪಡೆದ ‘KSRTC ಸಿಬ್ಬಂದಿ’ ಮಕ್ಕಳು: ನಗದು ಬಹುಮಾನ ನೀಡಿ ಸನ್ಮಾನಿಸಿ ಪ್ರೋತ್ಸಾಹಿಸಿದ ಸಚಿವ ರಾಮಲಿಂಗಾರೆಡ್ಡಿ

By kannadanewsnow0907/01/2026 3:38 PM

ಬೆಂಗಳೂರು: ಕೆ ಎಸ್ ಆರ್ ಟಿ ಸಿ ನಿಗಮದ ಸಿಬ್ಬಂದಿಗಳ ಮಕ್ಕಳು ಅತ್ಯುತ್ತಮ ವಿದ್ಯಾಭ್ಯಾಸ ಮಾಡಿ ಚಿನ್ನದ ಪದಕ ಪಡೆದಿದ್ದರು. ವಿಷಯ ತಿಳಿದಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ನಿಗಮದ ಕೇಂದ್ರ ಕಚೇರಿಗೆ ಕರೆಯಿಸಿ ಸನ್ಮಾನಿಸಿ, ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಆ ಮೂಲಕ ಮತ್ತಷ್ಟು ಸಾಧನೆ ಮಾಡೋದಕ್ಕೆ ಹುರುಪು ತುಂಬಿದರು. 

ಇಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಿಗಮದಲ್ಲಿನ ಸಿಬ್ಬಂದಿಗಳ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ, ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿರುವ 6 ವಿದ್ಯಾರ್ಥಿಗಳನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಸಂಸ್ಥೆಯ ವತಿಯಿಂದ ತಲಾ ರೂ.5,000/- ಗಳ ಗೌರವಧನ, ಪ್ರಮಾಣ ಪತ್ರ ನೀಡಿ ಗೌರವಿಸಿದರು. ಅಲ್ಲದೇ ಸಚಿವ ರಾಮಲಿಂಗಾರೆಡ್ಡಿ ಅವರು ವೈಯಕ್ತಿಕವಾಗಿ ಎಲ್ಲಾ 6 ವಿದ್ಯಾರ್ಥಿಗಳಿಗೆ ತಲಾ ರೂ.20,000/- ಗಳಂತೆ ನಗದು ಬಹಮಾನ ನೀಡಿ ಸನ್ಮಾನಿಸಿದರು.

1) ಕೆ ಎಸ್ ಆರ್ ಟಿ ಸಿಯ ಕೆಂಗೇರಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಮುನಿರಾಜಪ್ಪ ಅವರ ಪುತ್ರಿ ಡಾ. ಗಗನ ಎಂ., ಎಂ.ಬಿ.ಬಿ.ಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿದ್ದರು.

2) ಪುತ್ತೂರು ವಿಭಾಗದಲ್ಲಿ ಚಾಲಕ ಕಂ ನಿರ್ವಾಹಕ ಆಗಿ ಕೆಲಸ ಮಾಡುತ್ತಿರುವ ರೇಣುಕಾಚಾರ್ಯ ಅವರ ಪುತ್ರಿ ಕು|| ವಿಸ್ಮಯ ಟಿ.ಆರ್, M.Tech ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿದ್ದರು.

3) ಕು|| ರೂಫಿಯಾ ಕೆ.ಎಂ, M.Sc ( ಮಹಬೂಬ್ ಸಾಬ್ ಹೆಚ್. ಸಂಚಾರ ನಿಯಂತ್ರಕರು, ಚಿಕ್ಕಬಳ್ಳಾಪುರ ವಿಭಾಗ ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ 07 ಚಿನ್ನದ ಪದಕ ಪಡೆದಿರುತ್ತಾರೆ.

4) ಕು|| ಸತೀಶ್ ಕುಮಾರ್ ದೊಡ್ಡಮನಿ, Master of Performing Arts- Drama ( ಪದ್ದವ್ವ ಗಣಿ, ಚಾಲಕ ಕಂ ನಿರ್ವಾಹಕಿ, ಬಿ.ಸಂ. 6404, ಬೆಂಗಳೂರು ಕೇಂದ್ರೀಯ ವಿಭಾಗ, 6ನೇ ಘಟಕ ರವರ ಮಗ) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ.

5) ಡಾ. ಸಾನಿಯಾ ಬಿ.ಬಿ., Bachelor of Dental Surgery (BDS) ( ಅಕ್ರಂ ಪಾಷ, ಚಾಲಕ-ಕಂ-ನಿರ್ವಾಹಕ, ಬಿ.ಸಂ. 760, ಮೈಸೂರು ನಗರ ವಿಭಾಗ, ನಂಜನಗೂಡು ಘಟಕ ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ, 07 ಚಿನ್ನದ ಪದಕ ಹಾಗೂ 02 ಬೆಳ್ಳಿ ಪದಕ ಪಡೆದಿರುತ್ತಾರೆ.

6) ಕು|| ಟಿ. ಹರ್ಮೀನ್, B.Sc ( ತಾಯಬ್ ಅಹ್ಮದ್, ನಿರ್ವಾಹಕ, ಬಿ.ಸಂ. 1219, ಮೈಸೂರು ಗ್ರಾಮಾಂತರ ವಿಭಾಗ ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ, 06 ಚಿನ್ನದ ಪದಕ ಪಡೆದಿರುತ್ತಾರೆ.

ಈ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದ ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸ ಇವುಗಳೇ ಯಶಸ್ಸಿನ ಮಂತ್ರಗಳು. ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು‌ ವಿಜ್ಞಾನ, ತಂತ್ರಜ್ಞಾನ, ಕಲೆ, ಕ್ರೀಡೆ ಅಥವಾ ಯಾವುದೇ ಕ್ಷೇತ್ರವಾಗಿರಲಿ – ನೀವು ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಲು ಪ್ರಯತ್ನಿಸಿ ಎಂದರು.

ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ, ತಾಂತ್ರಿಕ ಸಿಬ್ಬಂದಿಗಳು ಬಹಳ ಶ್ರಮ ಜೀವಿಗಳಾಗಿದ್ದು, ಇವರುಗಳು ಸಾರ್ವಜನಿಕರ ಸೇವೆಗೆ ಹೆಚ್ಚಿನ ಅವಧಿಯನ್ನು ಮೀಸಲಿಟ್ಟು, ಕುಟುಂಬಕ್ಕೆ ಸಮಯವನ್ನು ನೀಡಲು ಕಷ್ಟಸಾಧ್ಯವಾಗಿರುತ್ತದೆ. ಆದರೂ ಸಹ ತಾವುಗಳು ಪೋಷಕರ ಶ್ರಮವನ್ನು ಅರ್ಥ ಮಾಡಿಕೊಂಡು ಉತ್ತಮ ವಿದ್ಯಾಭ್ಯಾಸ ಪಡೆದು ಚಿನ್ನದ ಪದಕ ಗಳಿಸಿ ಅವರಿಗೆ ಗೌರವ ತಂದಿರುವುದು ಶ್ಲಾಘನೀಯ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯಲ್ಲಿ ಶ್ರಮವಹಿಸಿದ ಎಲ್ಲಾ ಪೋಷಕರಿಗೂ ಅಭಿನಂದನೆ ತಿಳಿಸಿದರು.

ನಿಮ್ಮ ಜ್ಞಾನವನ್ನು ಕೇವಲ ನಿಮ್ಮ ಲಾಭಕ್ಕಾಗಿ ಮಾತ್ರವಲ್ಲ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಬಳಸಿ ಯಶಸ್ಸು ಖಂಡಿತ ನಿಮ್ಮದಾಗುತ್ತದೆ. ನಿಮ್ಮ ಭವಿಷ್ಯ ಪ್ರಕಾಶಮಾನವಾಗಲಿ ಎಂದು ಹಾರೈಸಿದರು.

ನಿಗಮದಲ್ಲಿನ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ವಿದ್ಯಾಚೇತನ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ ಈವರೆಗೂ 5,450 ವಿದ್ಯಾರ್ಥಿಗಳಿಗೆ ರೂ.2.76 ಕೋಟಿಗಳ ವಿದ್ಯಾರ್ಥಿ ವೇತನ ನೀಡಲಾಗಿರುತ್ತದೆ.

ಈ ಸಂದರ್ಭದಲ್ಲಿ ವಿ.ಎಸ್‌. ಆರಾಧ್ಯ, ಅಧ್ಯಕ್ಷರು, ಬೆಂ.ಮ.ಸಾ. ಸಂಸ್ಥೆ,  ಮೊಹಮ್ಮದ್‌ ರಿಜ್ವಾನ್‌ ನವಾಬ್, ಉಪಾಧ್ಯಕ್ಷರು, ಕರಾರಸಾ ನಿಗಮ, ಅಕ್ರಂ ಪಾಷ ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ, ಡಾ. ನಂದಿನಿದೇವಿ ಕೆ ಭಾಅಸೇ., ನಿರ್ದೇಶಕರು (ಸಿ ಮತ್ತು ಜಾ) ಕರಾರಸಾ ನಿಗಮ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

BREAKING NEWS

BREAKING : ರಾಜ್ಯದಲ್ಲಿ ಜವರಾಯನ ಅಟ್ಟಹಾಸ : ಬೆಂಗಳೂರಲ್ಲಿ ಪ್ರತ್ಯೇಕ ಅಪಘಾತದಲ್ಲಿ 6 ಜನ ಸ್ಥಳದಲ್ಲೇ ದುರ್ಮರಣ!

22/03/2026 6:17 AM1 Min Read

BIG NEWS: 2027ರ ಜನಗಣತಿ ಕಾರ್ಯಕ್ಕೆ ಎಲ್ಲಾ ಶಿಕ್ಷಕರನ್ನು ಅಗತ್ಯಕ್ಕನುಗುಣವಾಗಿ ನಿಯೋಜಿಸಿ: ರಾಜ್ಯ ಸರ್ಕಾರ ಆದೇಶ

22/03/2026 6:16 AM1 Min Read

ಏನಿದು ‘ಡಿಜಿಟಲ್ ಅರೆಸ್ಟ್’? ನಿಮ್ಮ ಹಣವನ್ನು ‘ಸೈಬರ್ ವಂಚಕರ ಜಾಲ’ದಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

22/03/2026 6:10 AM2 Mins Read
Recent News

ಇರಾನ್‌ಗೆ ಟ್ರಂಪ್ 48 ಗಂಟೆಗಳ ಅಂತಿಮ ಎಚ್ಚರಿಕೆ: ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯ ಮುನ್ಸೂಚನೆ

22/03/2026 7:22 AM

ತೈಲ ಬೆಲೆ ಏರಿಕೆಗೆ ಬ್ರೇಕ್: ಸಮುದ್ರದಲ್ಲಿರುವ ಇರಾನ್ ತೈಲ ಮಾರಾಟಕ್ಕೆ ಅಮೆರಿಕದಿಂದ 30 ದಿನಗಳ ಕಾಲ ವಿನಾಯಿತಿ

22/03/2026 7:06 AM

ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್: ವಿಮಾನಯಾನ ದರಗಳ ಮೇಲಿದ್ದ ಮಿತಿ ತೆರವುಗೊಳಿಸಿದ ಕೇಂದ್ರ ಸರ್ಕಾರ

22/03/2026 6:59 AM

​ಆದಾಯ ತೆರಿಗೆ ನಿಯಮ 2026: ಏಪ್ರಿಲ್ 1ರಿಂದ ಹೊಸ ಸ್ಲ್ಯಾಬ್‌ಗಳಿಲ್ಲ, ಆದರೆ ಬದಲಾಗಲಿವೆ ಪ್ರಮುಖ ನಿಯಮಗಳು!

22/03/2026 6:53 AM
State News
BREAKING NEWS KARNATAKA

BREAKING : ರಾಜ್ಯದಲ್ಲಿ ಜವರಾಯನ ಅಟ್ಟಹಾಸ : ಬೆಂಗಳೂರಲ್ಲಿ ಪ್ರತ್ಯೇಕ ಅಪಘಾತದಲ್ಲಿ 6 ಜನ ಸ್ಥಳದಲ್ಲೇ ದುರ್ಮರಣ!

By kannadanewsnow0522/03/2026 6:17 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ವರಾಯ ಅಟ್ಟಹಾಸ ಮೆರೆದಿದ್ದು, ಪ್ರತ್ಯೇಕ ಅಪಘಾತದಲ್ಲಿ 6 ಜನ ಸಾವನಪ್ಪಿದ್ದಾರೆ. ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು…

BIG NEWS: 2027ರ ಜನಗಣತಿ ಕಾರ್ಯಕ್ಕೆ ಎಲ್ಲಾ ಶಿಕ್ಷಕರನ್ನು ಅಗತ್ಯಕ್ಕನುಗುಣವಾಗಿ ನಿಯೋಜಿಸಿ: ರಾಜ್ಯ ಸರ್ಕಾರ ಆದೇಶ

22/03/2026 6:16 AM

ಏನಿದು ‘ಡಿಜಿಟಲ್ ಅರೆಸ್ಟ್’? ನಿಮ್ಮ ಹಣವನ್ನು ‘ಸೈಬರ್ ವಂಚಕರ ಜಾಲ’ದಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

22/03/2026 6:10 AM

GOOD NEWS : ಬೆಂಗಳೂರು ಜನತೆಗೆ ಗುಡ್ ನ್ಯೂಸ್ : ಮೇನಲ್ಲಿ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಆರಂಭ!

22/03/2026 6:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.