ಬೆಂಗಳೂರು : ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಪಟ್ಟಂತೆ ಗಲಾಟೆ ಆಗಿ ಫೈರಿಂಗ್ ವೇಳೆ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದ ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಕಾಂಗ್ರೆಸ್ ಹಾಗೂ ಬಿಜೆಪಿಯ 26 ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ್ದು ಅಲ್ಲದೆ, ಸೋಮಶೇಖರ ರೆಡ್ಡಿ ಗನ್ ಮ್ಯಾನ್ ಗುರು ಚರಣ ಸಿಂಗ್ ನನ್ನು ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆ ತಂದಿದ್ದಾರೆ.
ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಕೊಲೆ ಆರೋಪಿ ಗನ್ ಮ್ಯಾನ್ ಗುರು ಚರಣ್ ಸಿಂಗ್ ನಾಲ್ವರು ಗನ್ ಮ್ಯಾನ್, ಸೇರಿದಂತೆ ಎಲ್ಲಾ ಆರೋಪಿಗಳನ್ನು ಪೊಲೀಸರು ಹಾಜರುಪಡಿಸಿದ್ದರು. ಕೋರ್ಟ್ ಬಳಿ ಪೊಲೀಸರಿಂದ ಭಾರಿ ಬಿಗಿಬದ್ಧತೆ ಒದಗಿಸಲಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಎರಡು ಕೆಎಸ್ಆರ್ಪಿ ತಕುಡಿಗಳನ್ನು ನಿಯೋಜನೆ ಮಾಡಲಾಗಿದ್ದು ಕೆಎಸ್ಆರ್ಪಿ ತುಕುಡಿಗಳ ನಿಯೋಜನೆ ಮಾಡಲಾಗಿದೆ ಜೊತೆಗೆ ಸ್ಥಳೀಯ ಪೊಲೀಸರಿಂದ ಒದಗಿಸಲಾಗಿದೆ.








