ಬೆಂಗಳೂರು : ರಾಜ್ಯದಲ್ಲಿ 800 ಸರ್ಕಾರಿ (ಮ್ಯಾಗ್ನೆಟ್) ಶಾಲೆಗಳನ್ನು ADB, KKRDB ನಿಧಿ ಹಾಗೂ CEPMIZ ತಾಲ್ಲೂಕುಗಳಲ್ಲಿನ KMERC ನಿಧಿಗಳ ಸಹಾಯದಿಂದ ಕೆ.ಪಿ.ಎಸ್. ಮಾನದಂಡಗಳ ಕೈಪಿಡಿಯಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ (KPS) ಉನ್ನತೀಕರಿಸಲು ವಿಸ್ತ್ರತ ಯೋಜನಾ ವರದಿ (DPR) ತಯಾರಿಸಲು ಸಂಸ್ಥೆಯನ್ನು ಆಯ್ಕೆ ಮಾಡಲು ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ(1) ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರು ವಿಧಾನ ಮಂಡಲದಲ್ಲಿ ಮಂಡಿಸಿದ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಕಂಡಿಕೆ-105 ರಲ್ಲಿ “ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಹಂತದವರೆಗೂ ಒಂದೇ ಸೂರಿನಡಿ ಗುಣಮಟ್ಟ ಶಿಕ್ಷಣ ನೀಡಲು ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಪ್ರಾರಂಭಿಸಲಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ವಿಸ್ತರಿಸಲು ಉದ್ದೇಶಿಸಿದೆ. ಏಷಿಯನ್ ಡೆವಲೆಪ್ಮೆಂಟ್ ಬ್ಯಾಂಕ್ ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗುವುದು” ಮತ್ತು ಕಂಡಿಕೆ-118 ರಲ್ಲಿ ” ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಅವಿಷ್ಕಾರ ಯೋಜನೆ ಅಡಿ ರೂ.200 ಕೋಟಿ ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆ.ಪಿ.ಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು” ಎಂದು ಪೋಷಿಸಲಾಗಿದೆ.
ಮೇಲೆ ಓದಲಾದ ಕ್ರಮಾಂಕ (2)ರ ಸರ್ಕಾರದ ಆದೇಶದಲ್ಲಿ 800 ಸರ್ಕಾರಿ ಶಾಲೆಗಳನ್ನು (ಮ್ಯಾಗ್ನೆಟ್ ಶಾಲೆಗಳು) ಕರ್ನಾಟಕ ಪಬ್ಲಿಕ್ ಸ್ಕೂಲ್ಗಳಾಗಿ (KPS) ಉನ್ನತೀಕರಿಸುವ ಪ್ರಸ್ತಾವನೆಗೆ ಕೆಳಕಂಡ ಅಂಶಗಳಂತೆ ಅನುಮೋದನೆ ನೀಡಲಾಗಿದೆ;
a. ADB ನೆರವಿನಿಂದ 500 ಸರ್ಕಾರಿ ಶಾಲೆಗಳನ್ನು KPS ಶಾಲೆಗಳಾಗಿ ಉನ್ನತೀಕರಿಸಲು ಅನುಮೋದನೆ.
b. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 200 ಶಾಲೆಗಳನ್ನು ಕೆ.ಕೆ.ಆರ್.ಡಿ.ಬಿ. ಅನುದಾನದಿಂದ KPS ಶಾಲೆಗಳಾಗಿ ಆಗಿ ಉನ್ನತೀಕರಿಸಲು ತಾತ್ವಿಕ ಅನುಮೋದನೆ.
C. 10 CEPMIZ ತಾಲ್ಲೂಕುಗಳಲ್ಲಿ 100 ಶಾಲೆಗಳನ್ನು KPS ಶಾಲೆಗಳಾಗಿ KMERC ನಿಧಿಗಳಡಿಯಲ್ಲಿ ಉನ್ನತೀಕರಿಸಲು ತಾತ್ವಿಕ ಅನುಮೋದನೆ.
d. ಕೆ.ಪಿ.ಎಸ್. ಮಾನಕಗಳ ಕೈಪಿಡಿಯಲ್ಲಿ ನಿಗದಿಪಡಿಸಿರುವ ಮಾನದಂಡಗಳಂತೆ ಶಾಲಾವಾರು ವಿಸ್ತ್ರತ ಯೋಜನಾ ವರದಿ (Detailed Project Report-DPR) ತಯಾರಿಸಲು KTPP ಕಾಯ್ದೆ ಮತ್ತು
ನಿಯಮಗಳ ಪ್ರಕಾರ ಟೆಂಡರ್ ಆಹ್ವಾನಿಸಲು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ.
ಮೇಲೆ ಓದಲಾದ ಕ್ರಮಾಂಕ (3)ರ ಸರ್ಕಾರದ ಆದೇಶದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 200 ಶಾಲೆಗಳ ಪಟ್ಟಿ ಸಹಿತ ಪ್ರಸ್ತಾವನೆ ಸ್ವೀಕೃತಗೊಂಡಿದ್ದು, ಸರ್ಕಾರದ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ.
10 CEPMIZ ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿನಲ್ಲಿ 10 ಶಾಲೆಗಳಂತೆ 100 ಸರ್ಕಾರಿ ಶಾಲೆಗಳನ್ನು KPS ಶಾಲೆಗಳಾಗಿ ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಲಾಗಿದೆ ಮತ್ತು ಪ್ರಸ್ತಾವನೆಯನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆಗೆ ಸಲ್ಲಿಸಲು ಕ್ರಮವಹಿಲಾಗುತ್ತಿದೆ.
ಮೇಲೆ ಓದಲಾದ ಕ್ರಮಾಂಕ (4) ರಲ್ಲಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರು 800 ಸರ್ಕಾರಿ (ಮ್ಯಾಗ್ನೆಟ್) ಶಾಲೆಗಳನ್ನು ADB, KKRDB ನಿಧಿ ಹಾಗೂ CEPMIZ ತಾಲ್ಲೂಕುಗಳ KMERC ನಿಧಿಗಳ ಸಹಾಯದಿಂದ ಕೆ.ಪಿ.ಎಸ್. ಮಾನಕಗಳ ಕೈಪಿಡಿಯಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ಗಳಾಗಿ (KPS) ಉನ್ನತೀಕರಿಸಲು ಶಾಲಾವಾರು ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಬೇಕಾಗಿರುವಂತೆ ಶಾಲಾವಾರು ಸಮಗ್ರ ವಿಸ್ತ್ರತ ಯೋಜನಾ ವರದಿ (Detailed Project Report) ಅನ್ನು ತಯಾರಿಸುವ ಸಂಬಂಧ 800 KPS ಶಾಲೆಗಳ ವಿಸ್ತ್ರತ ಯೋಜನಾ ವರದಿಯನ್ನು (Detailed Project Report) ತಯಾರಿಸಲು ಸಂಸ್ಥೆಯನ್ನು ಗುರುತಿಸಲು ಕೆಟಿಪಿಪಿ ಕಾಯ್ದೆಯನ್ವಯ ಟೆಂಡರ್ ಆಹ್ವಾನಿಸಲು ಆಡಳಿತಾತ್ಮಕ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಕರ್ನಾಟಕ ಪಬ್ಲಿಕ್ ಶಾಲೆಗಳ ಬಲವರ್ಧನೆಗಾಗಿ ಆಯ್ಕೆ 800 ಸರ್ಕಾರಿ ಶಾಲೆಗಳನ್ನು ಪೂರ್ವ ಪ್ರಾಥಮಿಕ ತರಗತಿಗಳಿಂದ ಪದವಿ ಪೂರ್ವ ತರಗತಿಗಳವರೆಗೆ ಪ್ರತಿ ತರಗತಿಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಎರಡು ಪ್ರತ್ಯೇಕ ತರಗತಿಗಳನ್ನು ನಡೆಸಲು ಮತ್ತು ಪ್ರತಿ ತರಗತಿಗೆ ಒಂದು ಕೊಠಡಿಯಂತೆ ಕನಿಷ್ಟ 1200 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸುವಂತೆ ಶಾಲೆಯಲ್ಲಿನ ತರಗತಿ ಕೊಠಡಿಗಳ ಕೊರತೆಯನ್ನು ‘ಕರ್ನಾಟಕ ಪಬ್ಲಿಕ್ ಶಾಲಾ ಮಾನಕ’ಗಳ ಕೈಪಿಡಿಯಲ್ಲಿ (KPS Book of Standards) ನಿಗದಿಪಡಿಸಿರುವ ಮಾನದಂಡಗಳಂತೆ ಗುರುತಿಸಿ, National Building Code ಮತ್ತು ಕರ್ನಾಟಕ ಲೋಕೋಪಯೋಗಿ ಇಲಾಖೆಯು ನಿಗದಿಪಡಿಸಿರುವ ಇತ್ತೀಚಿನ ಏಕರೂಪ ಅನುಸೂಚಿತ ದರಪಟ್ಟಿಯಂತೆ (Common Schedule of Rates) ಕಾಮಗಾರಿ ಕೈಗೊಳ್ಳಲು ಟೆಂಡರ್ ಆಹ್ವಾನಿಸಲು ಸಿದ್ಧವಾಗಿರುವಂತೆ ಶಾಲಾವಾರು ಪ್ರತ್ಯೇಕ ವಿಸ್ತ್ರತ ಯೋಜನಾ ವರದಿಯನ್ನು (Detailed Project Report) ತಯಾರಿಸಲು ಸಂಸ್ಥೆಯನ್ನು ಗುರುತಿಸಲು ಕೆ.ಟಿ.ಪಿ.ಪಿ. ಕಾಯ್ದೆ ಮತ್ತು ನಿಯಮಗಳನುಸಾರ ಅಂದಾಜು ವೆಚ್ಚ ರೂ.18.00 ಕೋಟಿಗಳಲ್ಲಿ ಪಾರದರ್ಶಕವಾಗಿ ಟೆಂಡರ್ ಆಹ್ವಾನಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಅನುಮತಿ ನೀಡಿ ಆದೇಶಿಸಲಾಗಿದೆ.
800 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಕೆ.ಪಿ.ಎಸ್. ಮಾನಕಗಳ ಕೈಪಿಡಿಯಲ್ಲಿ ನಿಗದಿಪಡಿಸಿರುವ ಮಾನದಂಡಗಳಂತೆ ಶಾಲಾವಾರು ಪ್ರತ್ಯೇಕ ವಿಸ್ತ್ರತ ಯೋಜನಾ ವರದಿ (Detailed Project Report)ಗಳನ್ನು ತಯಾರಿಸಲು ತಗುಲುವ ಅಂದಾಜು ವೆಚ್ಚ ₹18.00 ಕೋಟಿಗಳನ್ನು ಲೆಕ್ಕ ಶೀರ್ಷಿಕೆ 4202-01-201-1-09 Strengthening of Karnataka Public Schools – EAP : 132 Other Capital Expenses ರಡಿ ಒದಗಿಸಲಾದ ಅನುದಾನದಿಂದ ಭರಿಸಬಹುದಾಗಿದೆ.









